ಕಾಸರಗೋಡು: ಕೋಯಿಕ್ಕೋಡು ಸನಿಹದ ಕೊಯಿಲಾಂಡಿ ಬಸ್ ನಿಲ್ದಾಣ ಸನಿಹದ ಲಾಟರಿ ಸ್ಟಾಲಿನಿಂದ ಓಣಂ ಬಂಪರ್ ಟಿಕೆಟ್‌ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ನಿವಾಸಿ ಅಬ್ಬಾಸ್(56) ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕೊಯಿಲಾಂಡಿಯ ವಿ.ಕೆ.ಲಾಟರಿ ಸ್ಟಾಲಿನಿಂದ ಭಾನುವಾರ 57 ಓಣಂ ಬಂಪರ್ ಟಿಕೆಟ್‌ಗಳನ್ನು ಈತ ಕದ್ದೊಯ್ದಿದ್ದನು. ಟಿಕೆಟುಗಳ ಒಟ್ಟು ಮೌಲ್ಯ 28,500 ರೂ. ಲಾಟರಿ ಸ್ಟಾಲ್ ವಾಲೀಕ ಮುಸ್ತಫ ನೀಡಿದ ದೂರಿನನ್ವಯ ಪೊಲೀಸರು ಸಿಸಿ ಟಿವಿ ಸಹಾಯದಿಂದ ಆರೋಪಿಯನ್ನು ಪತ್ತೆ ವಾಡಿದ್ದಾರೆ. ಲಾಟರಿ ಸ್ಟಾಲ್ ಟಿಕೆಟ್ ಖರೀದಿಗಾಗಿ ಗ್ರಾಹಕರು ತುಂಬಿಕೊಂಡಿದ್ದ ಸಂದರ್ಭ ಟಿಕೆಟ್ ನಂಬರ್ ಪರಿಶೀಲಿಸುವ ನೆಪದಲ್ಲಿ ಬಂಡಲ್ ಕೈಗೆತ್ತಿ ಅದರಿಂದ ಕೆಲವು ಟಿಕೆಟ್ ಅಪಹರಿಸಿ ಬಂಡಲ್ ತೆಗೆದಲ್ಲೇ ಇರಿಸಿ ಪರಾರಿಯಾಗಿದ್ದ.