ಬ್ಯಾಡಗಿ: ಕ್ರಿಪ್ಟೋ ಕರೆಸ್ಸಿ ಹಾಗೂ ಬೀಟ್ ಕ್ವಾಯಿನ್ನಲ್ಲಿ ಹಣ ಹೂಡಿಕೆ ಮಾಡಿದರೆ ಬಹಳಷ್ಟು ಹಣ ಗಳಿಸಬಹುದು ಎಂದು ನಂಬಿಸಿ 5.29 ಲಕ್ಷ ರೂ. ಮೋಸ ಮಾಡಿದ ವ್ಯಕ್ತಿಯ ವಿರುದ್ಧ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ಸಂಗಮೇಶ್ವರ ನಗರದ ನಿವಾಸಿ ಹಜರತ್ಅಲಿ ಬಾಬುಸಾಬ ಸೈದುಸಾಬ ಹಲಗೇರಿ (55) ಮೋಸ ಮಾಡಿರುವ ಆರೋಪಿ.
ಈತನ ವಿರುದ್ಧ ಸುರೇಶ ಹಂಚಿನಮನಿ (44) ಎಂಬುವರು ದೂರು ನೀಡಿದ್ದಾರೆ. ಹಜರತ್ಅಲಿ ನನಗೆ ಸ್ನೇಹಿತನಾಗಿದ್ದು ನಾನು ಕ್ರಿಪ್ಟೋ ಕರೆನ್ಸಿ ಹಾಗೂ ಬೀಟ್ ಕ್ವಾಯಿನ್ ವ್ಯವಹಾರ ಮಾಡುತ್ತಿದ್ದೇನೆ. ಇದರಲ್ಲಿ ಹೂಡಿಕೆ ಮಾಡಿದರೆ ಬಹಳಷ್ಟು ಹಣ ಗಳಿಸಬಹುದು ಎಂದು ನಂಬಿಸಿ ನನ್ನಿಂದ 5.29 ಲಕ್ಷ ರೂ. ತೆಗೆದುಕೊಂಡಿದ್ದಾನೆ. ಆದರೆ, ಈವರೆಗೂ ಹಣ ವಾಪಸ್ ಕೊಡದೆ ಮೋಸ ಮಾಡಿದ್ದಾನೆ ಎಂದು ಸುರೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.