ಹೂವಿನಹಡಗಲಿ: ಪಟ್ಟದ ಸ್ಮಶಾನ ರಸ್ತೆಯ ಹಳ್ಳಕ್ಕೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಉಪನಾಯಕನಹಳ್ಳಿಯ ಕೊಟೆಪ್ಪ (38) ಮೃತ.
ಕಾಲಿ ಬಾಟಲಿಗಳನ್ನು ಆಯುತ್ತ ಹಳ್ಳದ ಸಮೀಪ ಬಂದಿದ್ದಾರೆ. ಮದ್ಯ ಸೇವನೆ ಮಾಡಿದ್ದರಿಂದ ಅಮಲಿನಲ್ಲಿ ಆಯತಪ್ಪಿ ಹಳ್ಳಕೆ ಬಿದ್ದು ಮೃತಪಟ್ಟಿದ್ದಾರೆ. ದಾರಿಹೋಕರು ಹಳ್ಳದಲ್ಲಿ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿ ಪೊಲೀಸ್ ಠಾಣೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.