ಜಿಲ್ಲೆ

ನಿಶ್ಚಿತಾರ್ಥ ಉಂಗುರ ಕಳೆದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣು

ತುಮಕೂರು: ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ 35ನೇ ವಾರ್ಡ್‌ನ ದೇವರಾಯಪಟ್ಟಣದ ನಿವಾಸಿ ಕಮಲೇಶ್ (36) ಮೃತ ದುರ್ದೈವಿ. 3 ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಯುವತಿಯೊಂದಿಗೆ ಕಮಲೇಶ್ ವಿವಾಹ ನಿಶ್ಚಯವಾಗಿತ್ತು. ಸ್ನಾನ ಮಾಡುವ ವೇಳೆ ಕೈಯಲ್ಲಿದ್ದ ಉಂಗುರು ಕಳೆದು ಹೋಗಿತ್ತು. ಈ ವಿಚಾರವನ್ನು ಮನೆಯಲ್ಲಿ ಹೇಳಲು ಹೆದರಿ ಕಳೆದ ಶುಕ್ರವಾರ (ನ.17) ದಂದು ವಿಷ ಸೇವಿಸಿದ್ದ ಕಮಲೇಶ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.