ಜಿಲ್ಲೆ

ಸಿದ್ದಾಪುರ ತಾಲೂಕಿನ ವಿವಿಧೆಡೆ ನಷ್ಟ

ಸಿದ್ದಾಪುರ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆ-ಗಾಳಿಯಿಂದಾಗಿ ವಿವಿಧೆಡೆ ಹಾನಿ ಉಂಟಾಗಿದೆ.

ಕಿಲವಳ್ಳಿಯ ಮಹಾಸತಿ ದೇವಸ್ಥಾನದ ಸಭಾಭವನದ ಮೇಲೆ ಕಾಡು ಜಾತಿಯ ಮರ ಬಿದ್ದಿದೆ. ಶಿವಳಮನೆಯ ವಿನೋದಾ ನಾರಾಯಣ ಗಾಯತೊಂಡೆ ಅವರ ಅಡಕೆ ತೋಟದ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಗಿಜಗಿಣಿ ಗ್ರಾಮದ ರಸ್ತೆಯಲ್ಲಿ ಧರೆ ಕುಸಿದು ಸಂಚಾರಕ್ಕೆ ವ್ಯತ್ಯಯವಾಗಿದೆ.

ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗಿನವರೆಗೆ ದಾಖಲೆಯ 92.2 ಮಿ.ಮೀ. ಮಳೆ ಸುರಿದಿದೆ. ಈ ವರ್ಷ ಇಲ್ಲಿಯವರೆಗೆ 876ಮಿಮೀ ಮಳೆ ಬಿದ್ದಂತಾಗಿದೆ.