ಜಿಲ್ಲೆ

ಕಬ್ಬಿನ ಬೆಳೆಗೆ ಬೆಂಕಿ ತಗುಲಿ ನಷ್ಟ

Mandya

ಬೆಳಕವಾಡಿ: ಸಮೀಪದ ಕಗ್ಗಲೀಪುರ ಗ್ರಾಮದ ವೃಷಬೇಂದ್ರಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬುಧವಾರ ಸಂಜೆ ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮವಾಗಿದೆ.

ಜಮೀನಿನಲ್ಲಿ ರೈತರ ಪಂಪ್‌ಸೆಟ್‌ಗಳ ಸಂಪರ್ಕಕ್ಕಾಗಿ ಹಾದು ಹೋಗಿರುವ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ತಂತಿಗಳು ಒಂದಕ್ಕೊಂದು ತಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಿಡಿ ಕಬ್ಬಿನ ಬೆಳೆಗೆ ಬಿದ್ದಿದೆ. ಕೂಡಲೇ ಅಗ್ನಿಶಾಮಕ ವಾಹನ ಕರೆಸಿಕೊಂಡು ಅಕ್ಕಪಕ್ಕದ ಜಮೀನಿನ ರೈತರ ಸಹಕಾರದಿಂದ ಬೆಂಕಿ ನಂದಿಸಲು ಯತ್ನಿಸಿದರಾದರೂ ಗಾಳಿಯ ರಭಸಕ್ಕೆ ಎರಡು ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆ, 40 ಕ್ಕೂ ಹೆಚ್ಚು ಮರಗಳು ಹಾಗೂ ಹನಿ ನೀರಾವರಿ ಪೈಪ್‌ಲೈನ್ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಸೆಸ್ಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.