ಜಿಲ್ಲೆ

ಬೇಡಿಕೆ ಈಡೇರದಿದ್ದರೆ ಲಾರಿ ಮುಷ್ಕರ

Mangaluru - Hariprasad Rai



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಲಾರಿ ಮಾಲೀಕರ ಸಮಸ್ಯೆಗಳ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿದರು. ನಿಗದಿ ಪಡಿಸಿದ ಬಾಡಿಗೆ ದರ ನೀಡುವಂತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಾರಿಗೆ ಅಧಿಕಾರಿಗಳ ಸಭೆ ನಡೆಸುವಂತೆ ಕೋರಲಾಯಿತು.
ವಾರದೊಳಗೆ ಬಾಡಿಗೆ ದರ ನಿಗದಿಪಡಿಸದೇ ಇದ್ದಲ್ಲಿ ಕಲ್ಲಿದ್ದಲು ಸೇರಿದಂತೆ ಇತರ ಎಲ್ಲ ಸರಕು ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಮುಷ್ಕರ ಮಾಡಲಿದ್ದೇವೆ ಎಂದು ಲಾರಿ ಮಾಲಕರು ತೀರ್ಮಾನಿಸಿದ್ದಾರೆ.
ಸಂಘದ ಗೌರವಾಧ್ಯಕ್ಷರಾದ ಸುಜಿತ್ ಆಳ್ವ, ಅಧ್ಯಕ್ಷ ಸುಶಾಂತ್ ಶೆಟ್ಟಿ, ಉಪಾಧ್ಯಕ್ಷ ನಿಸಾರ್‌ಅಹಮದ್ ನೆಲ್ಯಾಡಿ, ಜತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್ ಉಪಸ್ಥಿತರಿದ್ದರು.