ಗೊಳಸಂಗಿ ಸಮೀಪದ ಮುತ್ತಗಿ ಕ್ರಾಸ್ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಲ್ಟಿಯಾದ ಐಷರ್ ಮಿನಿಲಾರಿ. 
ಜಿಲ್ಲೆ

ಲಾರಿಗಳ ಸರಣಿ ಅಪಘಾತ, ದಾಳಿಂಬೆ, ಬೆಳ್ಳುಳ್ಳಿ ಹಾನಿ

ಗೊಳಸಂಗಿ: ವಿಜಯಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಐಷರ್ ಮಿನಿಲಾರಿಯ ಎಂಜಿನ್ ಜಂಪ್ ಕಟ್ ಆದ ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ರಸ್ತೆ ವಿಭಜಕವನ್ನೇರಿ ಪಲ್ಟಿಯಾಗಿದ್ದು ಅದರ ಹಿಂಬದಿ ಬರುತ್ತಿದ್ದ ಬುಲೆರೋ ಗೂಡ್ಸ್ ವಾಹನ ತುರ್ತು ಬ್ರೇಕ್ ಹಾಕಿದ್ದರಿಂದ ಆ ವಾಹನ ಕೂಡ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಮೀಪದ ಮುತ್ತಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ-50ರ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.
ಮಹಾರಾಷ್ಟ್ರದ ಇಂದಾಪುರನಿಂದ ಕೇರಳದ ಕೊಚ್ಚಿಗೆ ದಾಳಿಂಬೆ ಹಣ್ಣನ್ನು ಹೊತ್ತೊಯ್ಯುತ್ತಿದ್ದ ಮಿನಿಲಾರಿ ಪಲ್ಟಿಯಾಗಿದ್ದರಿಂದ ಲಕ್ಷಾಂತರ ರೂ. ಬೆಲೆಯ ಹಣ್ಣು ಹಾನಿಯಾಗಿದೆ. ಮಿನಿಲಾರಿ ಹಿಂಬದಿ ಬರುತ್ತಿದ್ದ ಬುಲೆರೊ ಗೂಡ್ಸ್ ಚಾಲಕ ದಿಢೀರನೇ ಬ್ರೇಕ್ ಹಾಕಿದ್ದರಿಂದ ಆ ವಾಹನವು ರಸ್ತೆಯ ಇನ್ನೊಂದು ಬದಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಬುಲೆರೋ ವಾಹನದಲ್ಲಿದ್ದ ಬೆಳ್ಳುಳ್ಳಿ ನೆಲದ ಪಾಲಾಗಿದೆ.
ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.