ಜಿಲ್ಲೆ

ಬೆದರಿಸಿ ಸಾಲ ವಸೂಲಾತಿ,  ಲಾರಿ ಮಾಲೀಕರ ಆಕ್ರೋಶ

Dharwada - Basavaraj Idli

ಹುಬ್ಬಳ್ಳಿ: ಸರಕು ಸಾಗಣೆ ಸಲುವಾಗಿ ಲಾರಿ ಖರೀದಿಸಲು ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದುಕೊಂಡಿದ್ದು, ಅದರ ಮರುಪಾವತಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಡೆಯಬೇಕೆಂದು ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿರುವ ಸಂದ ಪದಾಧಿಕಾರಿಗಳು, ಸಾಲದಿಂದ ಲಾರಿ ಖರೀದಿಸಿ ಉದ್ಯಮದಲ್ಲಿ ತೊಡಗಿದ್ದೇವೆ. ಆದರೆ, ಕಳೆದ ಕೆಲ ತಿಂಗಳಿಂದ ಸತತ ಮಳೆಯಿಂದಾಗಿ ಉದ್ಯೋಗ ಇಲ್ಲದೇ ಸಮಸ್ಯೆಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಲ ಮರುಪಾವತಿ ಮಾಡಿಲ್ಲ ಎಂದು ಲಾರಿ ಜಪ್ತಿ ಮಾಡಲಾಗುತ್ತಿದೆ.

ಸಂಬಂಧಪಟ್ಟ ಬ್ಯಾಂಕ್, ಫೈನಾನ್ಸ್ ನವರಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆರ್ಬಿಐ ಮಾರ್ಗದಶಿರ್ ಸೂತ್ರಗಳ ವಿರುದ್ಧವಾಗಿ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಮರುಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಮನ ಹರಿಸಬೇಕೆಂದು ಸಂದ ಅಧ್ಯಕ್ಷ ಗೈಬುಸಾಬ ಹೊನ್ಯಾಳ ಕೋರಿದ್ದಾರೆ.