ಮಂಗಳೂರು: ಲಾರಿ ಬೆಲೆ, ಟೋಲ್ ಶುಲ್ಕ, ಇಂಧನ, ಬಿಡಿಭಾಗ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಿರುವ ಕಾರಣ ಲಾರಿಗಳಿಗೆ ಕನಿಷ್ಠ ಬಾಡಿಗೆ ದರ ನಿಗದಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಒತ್ತಾಯಿಸಿದರು.
ಮಂಗಳೂರು ಟ್ರಾನ್ಸ್‌ಪೋರ್ಟರ್ಸ್ ಕಾಂಟ್ರಾಕ್ಟರ್ಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಹೊಸಕೋಟಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಾಟಕ್ಕೆ ಬಳ್ಳಾರಿಗೆ ಭಾಗಕ್ಕೆ 1,400 ರೂ. ಹಾಗೂ ಕೊಪ್ಪಳ ಕಡೆಗೆ 1,300 ರೂ.ಪ್ರತಿ ಟನ್ ಗೆ ಕನಿಷ್ಠ ಬೆಲೆ ನಿಗದಿಗೊಳಿಸಬೇಕು. ಈಗಾಗಲೇ ಲಾರಿ ಮಾಲೀಕರು ಸಂಕಷ್ಟದಲ್ಲಿದ್ದು, ಕನಿಷ್ಠ ಬೆಲೆ ನಿಗದಿಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ಕಾರ್ಯದರ್ಶಿ ಸುನಿಲ್ ಡಿಸೋಜ, ಉಪಾಧ್ಯಕ್ಷ ನಿಸಾರ್ ಅಹ್ಮದ್ ನೆಲ್ಯಾಡಿ, ಕೋಶಾಧಿಕಾರಿ ಭಾಸ್ಕರ್ ರೈ, ಜೊತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್, ವೀರೇಂದ್ರ, ಮುಹಮ್ಮದ್ ಶಾಫಿ, ಶರೀಫ್ ನಾರಾವಿ, ಶರೀಫ್ ಮಿಯ್ಯರ್ ಉಪಸ್ಥಿತರಿದ್ದರು.
ಫೋಟೋ
ಎಂಎನ್‌ಜಿ- ಎಸ್‌ಇಪಿ 9- ಲೋರಿ ಓನರ್ಸ್
ಲಾರಿಗಳಿಗೆ ಕನಿಷ್ಠ ಬಾಡಿಗೆ ದರ ನಿಗದಿ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಅವರು ಮಂಗಳೂರು ಟ್ರಾನ್ಸ್‌ಪೋರ್ಟರ್ಸ್ ಕಾಂಟ್ರಾಕ್ಟರ್ಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಹೊಸಕೋಟಿ ಅವರಿಗೆ ಮನವಿ ಸಲ್ಲಿಸಿದರು.