ಜಿಲ್ಲೆ

ನಿಯಮ ಮೀರಿ 19.55 ಲಕ್ಷದ ಲಾರಿ ಜಪ್ತು : ಪ್ರತಿಭಟನೆ ಎಚ್ಚರಿಕೆ ನೀಡಿದ Lorry owners association

Uttara Kannada - Subash Hegde

ಕಾರವಾರ/ Lorry owners association Press Meet : ಯಲ್ಲಾಪುರದ ಮಾಲೀಕರೊಬ್ಬರ ಲಾರಿಯನ್ನು ಕಾನೂನು ಬಾಹಿರವಾಗಿ ಬ್ಯಾಂಕ್ ಸಿಬ್ಬಂದಿ ಜಪ್ತು ಮಾಡಿದ್ದು, ಟಯರ್‌ಗಳನ್ನು ಕಳ್ಳತನ ಮಾಡಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಅಽಕಾರಿಗಳೂ ಶಾಮೀಲಾಗಿ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಆರೋಪಿಸಿದೆ. ಸುದ್ದಿಗೋಷ್ಠಿ ನಡೆಸಿದ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಉಪಾಧ್ಯಕ್ಷರಾದ ಕೆ.ಎಸ್.ಮಣಿ ಹಾಗೂ ರಾಜೇಶ ಮಲ್ನಾಡ್ ಅವರು ಪ್ರಕರಣದ ಬಗ್ಗೆ ಎಸ್‌ಪಿ ಅವರಿಗೆ ದೂರು ನೀಡಲಾಗುತ್ತಿದೆ. ಅವರು ಶೀಘ್ರ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಯಲ್ಲಾಪುರ ಕಿರವತ್ತಿಯ ಮೊಹಮದ್ ರಫೀಕ್ ಮೋದಿನ್‌ಶಾ ಎಂಬುವವರು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದಲ್ಲಿ 19.55 ಲಕ್ಷ ರೂ. ಸಾಲ ಮಾಡಿ, ಲಾರಿ ಖರೀದಿಸಿದ್ದರು. ಸುಮಾರು 7 ಲಕ್ಷ ರೂ. ಮರು ಪಾವತಿ ಮಾಡಿದ್ದಾರೆ. ಆದರೆ, ಉಳಿದ ಹಣವನ್ನು ಮರು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಲಾರಿಯನ್ನು ಜಪ್ತು ಮಾಡಲಾಗಿದೆ. ಆದರೆ, ನಿಯಮವನ್ನು ಪಾಲಿಸಲಾಗಿಲ್ಲ.

Lorry owners association

ಬ್ಯಾಂಕ್ ಸಿಬ್ಬಂದಿ ಬಳಿ ಯಾವುದೇ ಜಪ್ತು ಪ್ರಕ್ರಿಯೆಯ ಲೈಸನ್ಸ್ ಇಲ್ಲ. ವಾಹನವನ್ನು ಜಪ್ತು ಮಾಡಿ ಪೊಲೀಸ್ ಠಾಣೆಯಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದು ಹೇಳಿದೆ. ಆ ನಿಯಮ ಪಾಲಿಸಿಲ್ಲ. ಹುಬ್ಬಳ್ಳಿಯಲ್ಲಿ ರಿಪೇರಿಗೆ ಬಿಟ್ಟ ಲಾರಿಯನ್ನು ವಶಕ್ಕೆ ಪಡೆದು, ಬ್ಯಾಂಕ್ ಸಿಬ್ಬಂದಿ ಮನೆಯಲ್ಲಿ 2 ದಿನ ಇಟ್ಟುಕೊಂಡರು. 6 ಟಯರ್‌ಗಳನ್ನು ಬಿಚ್ಚಿ ಮಾರಾಟಕ್ಕೆ ಯತ್ನಿಸಿದರು. ಡಿಸೆಂಬರ್ 23 ರಂದು ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಸ್ವೀಕರಿಸಿಲ್ಲ. ಸಾಕಷ್ಟು ಒತ್ತಡ ಹಾಕಿದ ಬಳಿಕ ಡಿಸೆಂಬರ್ 31 ರಂದು ಎಫ್‌ಐಆರ್ ದಾಖಲಿಸಿದ್ದಾರೆ.

ಆದರೆ, ಪೊಲೀಸ್ ಅಧಿಕಾರಿಗಳು ಸರಿಯಾಗಿ ಪಂಚನಾಮೆ ನಡೆಸಿಲ್ಲ. ನಿಯಮಗಳನ್ನು ಪಾಲಿಸಿಲ್ಲ. ಬ್ಯಾಂಕ್ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಲಾರಿ ಮಾಲೀಕ ಮೊಹಮದ್ ರಫೀಕ್, ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘದ ಮಾಧವ ನಾಯ್ಕ, ಕಿರಣ ನಾಯ್ಕ, ಶ್ರೀ ಕೃಷ್ಣ, ಸುರೇಶ ನಾಯ್ಕ, ಸದಾಶಿವ ನಾಯ್ಕ, ಪ್ರಶಾಂತ ನಾಯ್ಕ, ದಿಲೀಪ ಕುಮಾರ್, ಸುಜಯ್ ಮರಾಠಿ, ಸಾಗರ ಮೇತ್ರಿ ಇತರರು Lorry owners association ಸುದ್ದಿಗೋಷ್ಠಿಯಲ್ಲಿದ್ದರು.