ಚೆಲ್ಲಂಗೋಡು ಸೇತುವೆ ಬಳಿ ಲಾರಿ ಪಲ್ಟಿಯಾಗಿರುವುದು. 
ಜಿಲ್ಲೆ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

ಅಭಿನಯ್ ಎಚ್.ಎಂ

ಸಿದ್ದಾಪುರ: ಮರಗೋಡು ಸಮೀಪದ ಚೆಲ್ಲಂಗೋಡು ಸೇತುವೆ ಬಳಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

ರಸಗೊಬ್ಬರ ತುಂಬಿಕೊಂಡು ಮಂಗಳೂರು ಕಡೆಯಿಂದ ನೆಲ್ಯಹುದಿಕೇರಿ ಗ್ರಾಮದ ಕಡೆಗೆ ಬರುತ್ತಿದ್ದ ಲಾರಿ, ಚೆಲ್ಲಂಗೋಡು ಸೇತುವೆ ತಿರುವಿನಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಲಾರಿ ಜಖಂಗೊಂಡಿದ್ದು, ಚಾಲಕ, ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.

ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಲಾರಿಯನ್ನು ಮೇಲೆತ್ತಿ ಚಾಲಕ ಮತ್ತು ನಿರ್ವಾಹಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ನೆರವಾದರು.