ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬೇಡ್ತಿ ಸೇತುವೆ ಬಳಿ ನಡೆದಿದೆ.
ಕಟ್ಟಿಗೆ ತುಂಡುಗಳನ್ನು ತುಂಬಿಕೊಂಡು ಶಿರಸಿ ಕಡೆಯಿಂದ ದಾಂಡೇಲಿ ಕಡೆಗೆ ಹೊರಟಿದ್ದ ಲಾರಿ, ಬೇಡ್ತಿ ಘಟ್ಟದ ಇಳಿಜಾರಿನಲ್ಲಿ ಪಲ್ಟಿಯಾಗಿದೆ. ತುಂಡುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಲಾರಿ ಜಖಂಗೊಂಡಿದೆ. ಚಾಲಕ-ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಲಾರಿ ಮೇಲಕ್ಕೆತ್ತಲು ಕ್ರಮ ಕೈಗೊಂಡಿದ್ದಾರೆ.