ಸುಳ್ಯ: ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅರಂತೋಡಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಅರಂತೋಡಿನ ಭಾಸ್ಕರ ಎಂಬುವರ ಮನೆ ಬಳಿಯಿರುವ ತಿರುವಿನಲ್ಲಿ ರಾತ್ರಿ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.