ರಾಣೆಬೆನ್ನೂರ: ಅಶೋಕ ಲೈಲ್ಯಾಂಡ್ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಶೋಕ ಲೈಲ್ಯಾಂಡ್ನ ಚಾಲಕ ಮೃತಪಟ್ಟ ಟನೆ ತಾಲೂಕಿನ ದೇವರಗುಡ್ಡ&ಚನ್ನಾಪುರ ತಾಂಡಾ ಬಳಿ ಭಾನುವಾರ ನಡೆದಿದೆ.
ತಾಲೂಕಿನ ಕುದರಿಹಾಳ ಗ್ರಾಮದ ಉಮೇಶ ಹೊನ್ನಪ್ಪ ಬೆಳಕೇರಿ (29) ಮೃತ ಚಾಲಕ.
ಈತ ತನ್ನ ವಾಹನದಲ್ಲಿ ಮಿಡಿ ಸೌತೆಕಾಯಿ ಲೋಡ್ ಮಾಡಿಕೊಂಡು ಬಂದು ದೇವರಗುಡ್ಡ ಕ್ರಾಸ್ ಬಳಿ ವಾಹನ ನಿಲ್ಲಿಸಿದ್ದ. ಈ ಸಮಯದಲ್ಲಿ ಕ್ಯಾಂಟರ್ ವಾಹನದವನು ಬಂದು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಮೇಶನನ್ನು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.