ಜಿಲ್ಲೆ

ಲಾರಿ ಓಡಿಸುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವು

Haveri - Kariyappa Aralikatti

ಬ್ಯಾಡಗಿ: ಲಾರಿ ಓಡಿಸುತ್ತಿದ್ದ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಸೇತುವೆ ಬಳಿ ಎನ್​ಎಚ್​-48ರಲ್ಲಿ ಮಂಗಳವಾರ ನಡೆದಿದೆ.

ಮಹಾರಾಷ್ಟ್ರದ ಔರಂಗಾಬಾದ್​ ಜಿಲ್ಲೆಯ ಪುಲಬರಿ ತಾಲೂಕಿನ ಉಮ್ರಾವತಿ ಗ್ರಾಮದ ಬಾಬುರಾವ್​ ತಾತೆರಾವ್​ ಖಮ್ಮಟ್​ (50) ಮೃತ ಚಾಲಕ.

ಈತ ಬೆಂಗಳೂರು ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಕೆಳಗೆ ಇಳಿಯುವಷ್ಟರಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.