ಜಿಲ್ಲೆ

ಲಾರಿ ಮೇಲೆ ಹತ್ತಿದ ಚಾಲಕ ಅಲ್ಲೇ ಸಾವು; ಸುತ್ತಲಿದ್ದ ಜನರ ಕಣ್ಮುಂದೆಯೇ ದುರ್ಮರಣ

ಹಾವೇರಿ: ಸುತ್ತಲಿದ್ದ ಜನರು ನೋಡನೋಡುತ್ತಿದ್ದಂತೆ ಲಾರಿ ಮೇಲಕ್ಕೇರಿದ ಚಾಲಕ ದುರ್ಮರಣಕ್ಕೀಡಾದ ಪ್ರಸಂಗವೊಂದು ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಾವು ಸಂಭವಿಸಿದೆ.

ಹಾವೇರಿ ತಾಲೂಕಿನ ಕೂರಗುಂದ ಗ್ರಾಮದಲ್ಲಿ ಲಾರಿಯೊಂದರ ಚಾಲಕ ಶೇಬುಲ್ಲಾ (23) ಎಂಬಾತ ಸಾವಿಗೀಡಾಗಿದ್ದಾನೆ. ಈತ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ.

ಈತ ಹಾವೇರಿಯ ಕೂರಗುಂದ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹೂಕೋಸು ತುಂಬಿಕೊಂಡು ವಾಹನದ ಮೇಲೆ ಹತ್ತಿದ್ದು, ಆಗ ಅಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.