ಗೊಳಸಂಗಿ ರಾಷ್ಟ್ರೀಯ ಹೆದ್ದಾರಿ&50ರ ಬಳಿ ನಡೆದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಬೆಂಗಳೂರು ಮೂಲದ ಕಾರು. 
ಜಿಲ್ಲೆ

ಕಾರಿಗೆ ಲಾರಿ ಡಿಕ್ಕಿ, ಮಹಿಳೆ ಸಾವು

ಗೊಳಸಂಗಿ: ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ&50ರಲ್ಲಿ ಶನಿವಾರ ಸಂಜೆ ವಿಜಯಪುರ ಕಡೆಯಿಂದ ಬೆಂಗಳೂರಿನತ್ತ ಹೊರಟಿದ್ದ ತಮಿಳುನಾಡು ಮೂಲದ ಲಾರಿಯೊಂದು ಡಿಕ್ಕಿಯಾಗಿ ಮಹಿಳೆ ಸಾವಿಗೀಡಾಗಿದ್ದಾರೆ.

ಬೆಂಗಳೂರಿನಿಂದ ಕಲಬುರಗಿಯತ್ತ ಮಾರ್ಗ ತಪ್ಪಿ ಹೊರಟಿದ್ದ ಹುಂಡೈ ಕಾರು ಗೊಳಸಂಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ರಾಸ್​ ಮಾಡುವಾಗ ಅಪಘಾತವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಸ್ಥಳಿಯ 108 ವಾಹನದ ಮೂಲಕ ಸಾಗಿಸಲಾಯಿತು.

ದನಂತರ ಚಿಕಿತ್ಸೆ ಲಿಸದೆ ಬೆಂಗಳೂರು ಮೂಲದ ಮಹಿಳೆ ಶಶಿಕಲಾ ಪಿ.(56) ಸಾವಿಗೀಡಾಗಿದ್ದಾರೆ. ಮತ್ತೋರ್ವ ಮಹಿಳೆ ಉಜ್ವಲಾ (32) ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಸ್ಥಳಕ್ಕೆ ಕೂಡಗಿ ಎನ್​ಟಿಪಿಸಿ ಪೊಲೀಸ್​ ಠಾಣೆಯ ಎಎಸ್​ಐ ಎಲ್​.ಡಿ.ರೂಡಗಿ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.