ಜಿಲ್ಲೆ

ಸಿಮೆಂಟ್ ಸಾಗಾಟ ಲಾರಿ ಅಗ್ನಿಗಾಹುತಿ

ಉಪ್ಪಿನಂಗಡಿ : ಮಂಗಳೂರಿನಿಂದ ಬೆಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಗುರುವಾರ ಅಗ್ನಿಗಾಹುತಿಯಾಗಿದೆ.

ಲಾರಿಯ ಟಯರ್ ಸ್ಫೋಟಗೊಂಡು ಅಗ್ನಿ ಸ್ಪರ್ಶವಾಯಿತ್ತೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದ್ದು, ಘಟನೆ ಸಂಭವಿಸಿದಾಕ್ಷಣ ಚಾಲಕ ಹೊರ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವ ವೇಳೆಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ.