ಶಿವಮೊಗ್ಗ ತುಂಗಾನಗರ ಠಾಣೆ 
ಜಿಲ್ಲೆ

82 ಲಕ್ಷ ರೂ. ಮೌಲ್ಯದ ಅಡಕೆ ಹೊತ್ತು ತೆರಳಿದ್ದ ಲಾರಿ ನಾಪತ್ತೆ

ನವೀನ ಬಿ.ಎಂ

ಶಿವಮೊಗ್ಗ: ಶಿವಮೊಗ್ಗದಿಂದ ಉತ್ತರ ಪ್ರದೇಶಕ್ಕೆ ಲಕ್ಷಾಂತರ ರೂ. ಮೌಲ್ಯದ ಅಡಕೆ ಹೊತ್ತು ತೆರಳಿದ್ದ ಲಾರಿ ನಾಪತ್ತೆಯಾಗಿದೆ.

ಲಾರಿ ಮಾಲೀಕ ಮತ್ತು ಡ್ರೈವರ್ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಶಿವಮೊಗ್ಗದ ಅಡಕೆ ಮಂಡಿಯೊಂದರಿಂದ 82 ಲಕ್ಷ ರೂ. ಮೌಲ್ಯದ 430 ಚೀಲ ಅಡಕೆಯನ್ನು ಉತ್ತರ ಪ್ರದೇಶದ ಕಾನ್ಪುರಕ್ಕೆ ಕಳುಹಿಸಲಾಗಿತ್ತು. ಮೇ 13ರಂದು ಶಿವಮೊಗ್ಗದಿಂದ ಲಾರಿ ಹೊರಟಿದೆ. ಆದರೆ ಕಾನ್ಪುರಕ್ಕೆ ತಲುಪಿಲ್ಲ ಎಂದು ದೂರಲಾಗಿದೆ.

ಲಾರಿ ಚಾಲಕ ಮತ್ತು ಮಾಲೀಕನಿಗೆ ಕರೆ ಮಾಡಿದರೆ ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಬರುತ್ತಿದ್ದು, ಘಟನೆ ಸಂಬಂಧ ಅಡಕೆ ಮಂಡಿ ಮಾಲೀಕರು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.