ಜಿಲ್ಲೆ

ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸಾವು

Haveri - Kariyappa Aralikatti

ರಾಣೆಬೆನ್ನೂರ: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹೂಲಿಹಳ್ಳಿ ಬಳಿ ಸೋಮವಾರ ಸಂಭವಿಸಿದೆ.

ಇಲ್ಲಿಯ ಅಲ್ತಾಫ್ ನಗರದ ನಿವಾಸಿ ನಜರುಲ್ಲಾಖಾನ ಬಾಬುಸಾಬ ಪಠಾಣ (47) ಮೃತ ವ್ಯಕ್ತಿ.

ಇವರು ಕಾರಿನಲ್ಲಿ ರಾಣೆಬೆನ್ನೂರಿನಿಂದ ಗೋವಾಕ್ಕೆ ಹೊರಟಿದ್ದರು. ಹೂಲಿಹಳ್ಳಿ ಬಳಿ ಬಂದಾಗ ಕಾರು ರಸ್ತೆ ನಿಲ್ಲಿಸಿ ಪಾಸ್ಟ್ಯಾಗ್ ರಿಚಾರ್ಜ್ ಮಾಡಿಸುವ ಸಲುವಾಗಿ ಕಾರು ಇಳಿದು ಅದರ ನಂಬರ್ ನೋಡುತ್ತಿದ್ದಾಗ ಏಕಾಏಕಿ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ನಜರುಲ್ಲಾಖಾನ ಸ್ಥಲದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.