ಜಿಲ್ಲೆ

ಭೀಕರ ಅಪಘಾತಕ್ಕೆ ಬೆಚ್ಚಿದ ಜನ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

arunakunigal

ಧಾರವಾಡ: ನಗರ ಹೊರವಲಯದ ಸವದತ್ತಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಕಬ್ಬು ತುಂಬಿದ್ದ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಕಾರಿನಲ್ಲೇ ಚೆಲ್ಲಾಪಿಲ್ಲಿಯಾಗಿದ್ದವು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದರು.

ಧಾರವಾಡದಿಂದ ಸವದತ್ತಿಗೆ ಲಾರಿ ಹೋಗುತ್ತಿತ್ತು. ಸವದತ್ತಿಯಿಂದ ಧಾರವಾಡಕ್ಕೆ ಕಾರು ಆಗಮಿಸುತ್ತಿತ್ತು. ಮಾರ್ಗಮಧ್ಯೆ ಧಾರವಾಡ-ಸವದತ್ತಿ ರಸ್ತೆಯ ಕೆಇಬಿ ಗ್ರೀಡ್ ಬಳಿ ಅಪಘಾತವಾಗಿದೆ. ಓರ್ವ ಮಹಿಳೆ ಸೇರಿ ಮೂವರ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.