ಸುಳ್ಯ: ಎಲಿಮಲೆ ಅರಂತೋಡು ರಸ್ತೆಯಲ್ಲಿ ಪಿಂಡಿಮನೆಯಲ್ಲಿ ಅಧಿಕ ಭಾರ ಹೊತ್ತು ಸಾಗುತ್ತಿದ್ದ ಲಾರಿ ಪಿಂಡಿಮನೆ ಎಂಬಲ್ಲಿ ಹೂತು ಹೋದ ಘಟನೆ ಗುರುವಾರ ನಡೆದಿದೆ. ಇದರಲ್ಲಿ ಮೂರು ಯೂನಿಟ್‌ಗಿಂತ ಜಾಸ್ತಿ ಜಲ್ಲಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಇದರಿಂದ ರಸ್ತೆಗೆ ಹಾನಿಯಾಗುತ್ತಿರುವುದರಿಂದ ಮಿತಿಗಿಂತ ಹೆಚ್ಚಿನ ಭಾರ ಹೊತ್ತು ಸಾಗುವ ವಾಹನಗಳಿಗೆ ನಿಷೇಧ ಮಾಡಬೇಕೆಂದು ಸಾರ್ವಜನಿಕರು ಪಿಡಬ್ಲುೃಡಿ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜನ ಹೋರಾಟಕ್ಕಿಳಿಯುವ ಮುನ್ನ ಇಲಾಖೆ ಎಚ್ಚೆತ್ತು ಕಾನೂನು ಪಾಲನೆ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.