ಜಿಲ್ಲೆ

ಬಿ.ಸಿ.ರೋಡ್ ಮೇಲ್ಸೇತುವೆಯಲ್ಲಿ ಅನಾಥ ಲಾರಿ

ಸೌಮ್ಯ ಆರ್

ಬಂಟ್ವಾಳ: ಕಳೆದ ಹಲವು ದಿನಗಳಿಂದ ಬಿ.ಸಿ.ರೋಡಿನ ಮೇಲ್ಸೆತುವೆಯ ಮೇಲೆ ಲೋಡು ತುಂಬಿದ ಲಾರಿಯೊಂದು ನಿಂತಿದೆ. ಕೆಟ್ಟು ನಿಂತಿದೆಯೋ ಅಥವಾ ಚಾಲಕ ಇಲ್ಲಿ ನಿಲ್ಲಿಸಿ ಹೋಗಿದ್ದಾನೋ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಕೆಟ್ಟು ನಿಂತಿದ್ದರೆ ಅದನ್ನು ಇಷ್ಟೋತ್ತಿಗೆ ದುರಸ್ತಿ ಪಡಿಸುವ ಕಾರ್ಯ ಆಗಬೇಕಿತ್ತು. ಆದರೆ ದುರಸ್ತಿ ನಡೆಸುವ ಕಾರ್ಯವೂ ನಡೆಯುತ್ತಿಲ್ಲ. ಹಲವು ದಿನಗಳಿಂದ ಲಾರಿ ನಿಂತಿದ್ದರೂ ಅದನ್ನು ಅಲ್ಲಿಂದ ತೆರವು ಮಾಡುವ ಬಗ್ಗೆ ಪೊಲೀಸರು ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.