ಸಿಂಧನೂರು: ಶ್ರೀರಾಮ ನವಮಿ ನಿಮಿತ್ತ ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಸೋಮವಾರ ಮೊಸರು ಗಡಿಗೆ ಒಡೆದು ಓಕುಳಿ ಆಚರಿಸಲಾಯಿತು.
ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಭಜನೆ ಮುಖಾಂತರ ರಾಮ ಮಂದಿರದ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಶ್ರೀರಾಮನಿಗೆ ಕಾಯಿ, ಹಣ್ಣು ಅರ್ಪಿಸಿ ಮಂಗಳಾರತಿ ನೆರವೇರಿಸಿದರು. ಭಕ್ತರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ವೇದಮೂರ್ತಿ ರಾಮಕೃಷ್ಣಾಚಾರ್ ಗೋನ್ವಾರ, ನರಸಿಂಹಾಚಾರ್ ಮಠಾಧಿಕಾರ್, ಗೋವಿಂದರಾವ್ ಕುಲಕರ್ಣಿ, ಸುಬ್ಬಾಶಾಸ್ತ್ರೀ, ವಿಶ್ವನಾಥ ಕಲ್ಲೂರು, ರಾಜು ಬಂಡಿ ವಕೀಲ, ಭೀಮಸೇನ ಜಾಗೀರದಾರ, ಮನೋಜ್ ಕುಲಕರ್ಣಿ, ವೆಂಕಟೇಶ ಕೆಂಗಲ್, ಪ್ರಹ್ಲಾದ ಕುಲಕರ್ಣಿ, ಪ್ರಭು ದೇಶಪಾಂಡೆ, ಹನುಮಂತಾಚಾರ್ ಮಸ್ಕಿ, ರಾಘವೇಂದ್ರಾಚಾರ್ ಮಸ್ಕಿ, ಗುಂಡೂರಾವ್ ಚನ್ನಳ್ಳಿ, ರಾಘವೇಂದ್ರರಾವ್ ಚನ್ನಳ್ಳಿ, ದಿನೇಶ ಹೆಬ್ಬಾಳ, ಆನಂದ ಗೋರ್ಕರ್, ಪ್ರಭಾಕರ ಕುಲಕರ್ಣಿ, ಅವಿನಾಶ್ ಬಂಡಿವಕೀಲ್, ವಿನಾಯಕ ಕಲ್ಲೂರು ಇದ್ದರು.