ಭಗವಾನ್ ಮಹಾವೀರ ಜಯಂತಿ ನಿಮಿತ್ತ ರಾಯಚೂರಿನ ಪ್ರಮುಖ ಬೀದಿಗಳಲ್ಲಿ ಜೈನ್ ಸಮುದಾಯದಿಂದ ಭಾನುವಾರ ಮಹಾವೀರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಸಚಿವ ಎನ್.ಎಸ್.ಬೋಸರಾಜು, ಜೈನ್ ಸಮುದಾಯದ ಮುಖಂಡರಾದ ಪಾರಸಮಲ್ ಸುಖಾಣಿ, ಶಾಂತಿಲಾಲ್ ಮೂಥಾ, ಪ್ರಕಾಶಚಂದ್ ಚೋರಡಿಯಾ, ನರೇಂದ್ರ ಮೂಥಾ, ಮಾಣಿಕ್‌ಚಂದ್ ಮರೋಟಿ, ಅಶೋಕಕುಮಾರ ಜೈನ್, ವಿಜಯರಾಜ ಮೂಥಾ, ಸಂಜಯಕುಮಾರ ಸಂಚೇತಿ ಇದ್ದರು. 
ಜಿಲ್ಲೆ

ಭಗವಾನ್ ಮಹಾವೀರ ಭಾವಚಿತ್ರ ಮೆರವಣಿಗೆ

ರಾಚಯ್ಯ ಸ್ವಾಮಿ

ರಾಯಚೂರು: ಭಗವಾನ್ ಮಹಾವೀರ ಜಯಂತಿ ನಿಮಿತ್ತ ಜೈನ್ ಸಮುದಾಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ನಗರದ ಜೈನ್ ಮಂದಿರದ ಮುಂಭಾಗದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾವೀರ ವೃತ್ತ, ಬಟ್ಟೆ ಬಜಾರ್, ಸರ್ಾ ಬಜಾರ್, ಪಟೇಲ್ ರಸ್ತೆ, ಸಿಟಿ ಚಿತ್ರಮಂದಿರ ವೃತ್ತ, ಚಂದ್ರವೌಳೇಶ್ವರ ವೃತ್ತ, ಹರಿಹರ ರಸ್ತೆ ಮಾರ್ಗವಾಗಿ ಮೆರವಣಿಗೆ ಪುನಃ ಜೈನ್ ಮಂದಿರಕ್ಕೆ ಬಂದು ತಲುಪಿತು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಜೈನ್ ಸಮುದಾಯದ ಮುಖಂಡರಾದ ಪಾರಸಮಲ್ ಸುಖಾಣಿ, ಶಾಂತಿಲಾಲ್ ಮೂಥಾ, ಪ್ರಕಾಶಚಂದ್ ಚೋರಡಿಯಾ, ನರೇಂದ್ರ ಮೂಥಾ, ಮಾಣಿಕ್‌ಚಂದ್ ಮರೋಟಿ, ಅಶೋಕಕುಮಾರ ಜೈನ್, ವಿಜಯರಾಜ ಮೂಥಾ, ಸಂಜಯಕುಮಾರ ಸಂಚೇತಿ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.