ಜಿಲ್ಲೆ

ಸಾಲ್ಡಾನಾ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ

ಮಂಜುನಾಥ ಅಂಗಡಿ

ಧಾರವಾಡ: ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನಾ ಜೀವಂತ ದಂತಕಥೆ. ತಮ್ಮ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ೯೯ನೇ ಶಾಲೆಗೆ ದತ್ತಿ ಇಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ ಎಂದು ನಗರ ಕ್ಷೇತ್ರ ಶಿಕ್ಷಣಾಽಕಾರಿ ಉಮೇಶ ಬಮ್ಮಕ್ಕನವರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗುರುವಾರ ಆಯೋಜಿಸಿದ್ದ ಲೂಸಿ ಸಾಲ್ಡಾನಾ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಸಂಪಾಕತ್ವದಲ್ಲಿ ಹೊರತಂದ ಸೂರ್ತಿಕಿರಣ' ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಲೂಸಿ ಅವರ ವ್ಯಕ್ತಿತ್ವವನ್ನು ವೈ.ಬಿ. ಕಡಕೋಳ ಕೃತಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಎಂದರು. ವಿವಿಧ ಕ್ಷೇತ್ರಗಳ ಸಾಧಕರಿಗೆಶ್ರಮಿಕರತ್ನ' ಪ್ರಶಸ್ತಿ ಹಾಗೂ ಸಾಧಕ ಶಿಕ್ಷಕರಿಗೆ `ಶಿಕ್ಷಕರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಟಬಾಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಲ್ಲಿಗವಾಡದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಹಾಗೂ ಹುಬ್ಬಳ್ಳಿಯ ಅಕ್ಕ ಪೌಂಢೇಶನ್ ಟ್ರಸ್ಟ್ಗೆ ಉತ್ತಮ ಶಾಲೆ- ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಮಾತನಾಡಿ, ಶಿಕ್ಷಣ, ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸಾಲ್ಡಾನಾ ಗುರುಮಾತೆಯ ಹೆಸರಿನಲ್ಲಿ ಸನ್ಮಾನಿಸಿರುವುದು ಅರ್ಥಪೂರ್ಣ ಎಂದರು.
ಲೂಸಿ ಕೆ. ಸಾಲ್ಡಾನ, ಶಂಕರ ಕುಂಬಿ, ವೈ.ಬಿ. ಕಡಕೋಳ, ಭೀಮಪ್ಪ ಕಾಸಾಯಿ, ವಿ.ಎನ್. ಕೀರ್ತಿವತಿ, ಮಲ್ಲಿಕಾರ್ಜುನ ಉಪ್ಪಿನ, ವೀಣಾ ಹೊಸಮನಿ, ಆರ್. ರಾಮಕೃಷ್ಣ, ಇತರರಿದ್ದರು.
ಆರ್.ಎಂ. ಕುರ್ಲಿ ನಿರ್ವಹಿಸಿದರು. ಎಲ್.ಐ.ಲಕ್ಕಮ್ಮನವರ ಸ್ವಾಗತಿಸಿದರು. ಚಂದ್ರು ತಿಗಡಿ ವಂದಿಸಿದರು.