ಜಿಲ್ಲೆ

ಮತ್ತೊಂದು ಎಡವಟ್ಟು ಮಾಡಿಕೊಂಡ ಲೂಸ್​ ಮಾದ!

arunakunigal

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಈಗಾಗಲೇ ಐಎಸ್‍ಡಿ(ಆಂತರಿಕ ಭದ್ರತಾ ವಿಭಾಗ) ವಿಚಾರಣೆ ಎದುರಿಸಿರುವ ನಟ ಲೂಸ್ ಮಾದ ಯೋಗಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಗಿರಿನಗರದ ಟಾಟಾ ಪ್ರಮೋಟ್ ಅಪಾರ್ಟ್​ಮೆಂಟ್​ನಲ್ಲಿ ಪಾರ್ಟಿ ಮಾಡುತ್ತ ಅಕ್ಕಪಕ್ಕದ ಅಪಾರ್ಟ್​ಮೆಂಟ್​ ನವರಿಗೆ ಕಿರಿಕಿರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿರಿ ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

ಪಾರ್ಟಿ ಮಾಡುತ್ತ ಸಮಸ್ಯೆ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿದ ಸ್ಥಳೀಯ ನಿವಾಸಿಗಳು, 'ಸರ್, ಲೂಸ್ ಮಾದ ಯೋಗಿ ಹಾಗೂ ಸ್ನೇಹಿತರು ಪಾರ್ಟಿ ಮಾಡ್ತಾ ಕಿರಿಕಿರಿ ಮಾಡ್ತಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಗಿರಿನಗರ ಬೀಟ್ ಪೊಲೀಸರು, ಪಾರ್ಟಿ ಮಾಡುವಾಗ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಮಾಡದಂತೆ ವಾರ್ನಿಂಗ್ ಕೊಟ್ಟು ಹೋಗಿದ್ದಾರೆ.