ಸಿರಿಗೇರಿ ಸಮೀಪದ ಕೊಂಚಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕರಾದ ಮಂಜುನಾಥ, ಎಚ್.ದುರ್ಗಪ್ಪ ಇತರರಿದ್ದರು. 
ಜಿಲ್ಲೆ

ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಿ

ಸಿರಿಗೇರಿ: ಕೊಂಚಗೇರಿ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಮುಖ್ಯಶಿಕ್ಷಕರಾದ ಮಂಜುನಾಥ್ ಮತ್ತು ಎಚ್.ದುರುಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿ, ಗುರು-ಹಿರಿಯರ ಬಗ್ಗೆ ಪೂಜ್ಯ ಭಾವನೆ ಹೊಂದಿರಬೇಕು ಎಂದರು.

ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಎಸ್‌ಡಿಎಂಸಿ ಅಧ್ಯಕ್ಷ ಕರಡಹಳ್ಳಿ ಹೊನ್ನೂರಪ್ಪ, ಸದಸ್ಯರಾದ ಮಳೆಪ್ಪ, ಬಸವರಾಜ, ಹನುಮಂತಪ್ಪ,ನಾರಾಯಣಪ್ಪ, ಯಂಕಪ್ಪ, ಚಾಮುಂಡಿ, ವೀರೇಶ, ಸುಧಾ, ಗಂಗಾಧರ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಬಸವರಾಜ, ಶಿವಕುಮಾರ, ಗೋವಿಂದರಾಜ, ಪಂಚಾಕ್ಷರಯ್ಯ ಇತರರಿದ್ದರು.