ಬುಧವಾರ ಬೆಳಗ್ಗೆ ಒಂಟಿ ಆನೆ ಗ್ರಾಮದ ಹೊರ ವಲಯಯದ ಜಮೀನಿನಲ್ಲಿ ಕಾಣಿಸಿಕೊಂಡಿದೆ. ಜಮೀನಿಗೆ ಹೋದ ರೈತರೊಬ್ಬರು ಆನೆ ಕಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದಾಗ, ಉಳಿದ ರೈತರು ಜಮೀನುಗಳ ಬಳಿಗೆ ಹೋಗದಂತೆ ಎಚ್ಚರ ವಹಿಸಿದ್ದರು.
ಬಿಡದಿ: ಬಾನಂದೂರು ಗ್ರಾಮದ ಹೊರವಲಯದಲ್ಲಿ ಒಂಟಿ ಆನೆ ಕಾಣಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಗ್ರಾಮದ ಕೂಗಳತೆ ದೂರದಲ್ಲಿ ಹಂದಿಗುಂದಿ ಅರಣ್ಯ ಪ್ರದೇಶವಿದ್ದು, ಒಂಟಿ ಆನೆ ಆಹಾರ ನೀರು ಹರಿಸಿ ಕೆಂಪನಹಳ್ಳಿ ಮಾರ್ಗವಾಗಿ ಬಾನಂದೂರು ಗ್ರಾಮಕ್ಕೆ ಬಂದಿದೆ. ಬರುವ ವೇಳೆಯಲ್ಲಿ ಸಾಕಷ್ಟು ರೈತರ ಜಮೀನುಗಳ ಬೆಳೆಯನ್ನು ನಾಶ ಪಡಿಸಿದೆ. ಮತ್ತೆ ಅರಣ್ಯದ ಕಡೆಗೆ ಹೋಗುವ ವೇಳೆಗೆ ಬೆಳಕಾದ ಕಾರಣ ಅಲ್ಲೆ ಇದ್ದ ಪೊದೆಯಲ್ಲಿ ಅವಿತುಗೊಂಡಿದೆ.
ಬಿಡದಿ ವಲಯ ಅರಣ್ಯಾಧಿಕಾರಿ ಭೈರವ ಮಾತನಾಡಿ, ಬಾನಂದೂರು ಗ್ರಾಮದ ಹೊರ ವಲಯದಲ್ಲಿನ ಪೊದೆಯಲ್ಲಿ ಒಂಟಿ ಆನೆ ಕಾಣಿಸಿಕೊಂಡಿದ್ದು, ಆನೆಯನ್ನು ರಾತ್ರಿ ವೇಳೆ ಹಂದಿಗುಂದಿ ಅರಣ್ಯ ಪ್ರದೇಶಕ್ಕೆ ಓಡಿಸುವ ಕಾರ್ಯ ಮಾಡಲಾಗಿದೆ ಎಂದರು
ಒಂಟಿ ಆನೆ ಬಂದಿರುವ ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾಡಿಗಟ್ಟಲು ಪ್ರಯತ್ನಿಸಿದರು.