ಉಳ್ಳಾಲ: ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಲೋಕಕಲ್ಯಾಣ ಮೇಳ ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಶನಿವಾರ ನಡೆಯಿತು.
ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ ಉದ್ಘಾಟಿದರು. ಡೇನಲ್ಮ್ ಜಿಲ್ಲಾ ಅಭಿಯಾನದ ವ್ಯವಸ್ಥಾಪಕಿ ಐರಿನ್ ರೆಬೆಲ್ಲೊ ಪಿಎಂ ಸ್ವನಿಧಿ 2.0 ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕ ಅತ್ಯೇಶ್ ಸಾಮಾಜಿಕ ಭದ್ರತಾ ಯೋಜನೆ ಡಿಜಿಟಲ್ ವ್ಯವಹಾರ ಜನ ಸುರಕ್ಷಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಉಳ್ಳಾಲ ನಗರಸಭೆ ಉಪಾಧ್ಯಕ್ಷೆ ಸಪ್ನ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ನಗರಸಭಾ ಸದಸ್ಯರಾದ ವೀಣಾ ಶಾಂತಿ ಡಿಸೋಜ, ಯು.ಎ.ಇಸ್ಮಾಯಿಲ್, ಯು.ಪಿ.ಅಯ್ಯೂಬ್ ಮಂಚಿಲ, ಬೀದಿಬದಿ ವ್ಯಾಪಾರಸ್ಥರ ನಾಮನಿರ್ದೇಶಿತ ಸದಸ್ಯೆ ದೀಕ್ಷಿತ, ಯೂನಿಯನ್ ಬ್ಯಾಂಕ್ ತೊಕ್ಕೊಟ್ಟು ಶಾಖೆ ವ್ಯವಸ್ಥಾಪಕ ರಾಜೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಮುದಾಯ ಸಂಘಟಕ ರೋಹಿನಾಥ್ ಕಾರ್ಯಕ್ರಮ ನಿರೂಪಿಸಿದರು.