ಲೋಕೇಶ್ವರ ಮೂರ್ತಿ 
ಜಿಲ್ಲೆ

ಇಂದಿನಿಂದ ಲೋಕೇಶ್ವರ ಜಾತ್ರಾ ಮಹೋತ್ಸವ

ವಿನಯ ಆಶೋಕ ನಾಯ್ಕ

ಲೋಕಾಪುರ: ಪಟ್ಟಣದ ಲೋಕೇಶ್ವರ ದೇವಸ್ಥಾನದ ಶ್ರೀ ಲೋಕೇಶ್ವರ ಜಾತ್ರಾ ಮಹೋತ್ಸವವು ಡಾ. ಕರಬಸಪ್ಪ ಲೋಕಣ್ಣ ಉದಪುಡಿ ಅವರ ಸಹಕಾರದೊಂದಿಗೆ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ಕಿರಣರಾವ್ ಮೋಹನರಾವ್ ದೇಸಾಯಿ ನೇತೃತ್ವದಲ್ಲಿ ಫೆ.23ರಿಂದ ಮಾ.3ರವರೆಗೆ ಜರುಗಲಿದೆ.

ಜಾತ್ರೆಯ ಅಂಗವಾಗಿ 23, 24 ರಂದು ನಂದಿಕೋಲು ಉತ್ಸವ, .25 ರಂದು ಗ್ರಾಮದೇವತೆಗೆ ಉಡಿ ತುಂಬಲಾಗುವುದು. 26 ರಂದು ಮಹಾಶಿವರಾತ್ರಿ ಅಂಗವಾಗಿ ರುದ್ರಾಭೀಷೇಕ ನಡೆಯಲಿದೆ ಹಾಗೂ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ವತಿಯಿಂದ ಭಜನಾ ಉತ್ಸವ ನಡೆಯಲಿದೆ.

.27 ರಂದು ಸಂಜೆ 5 ಗಂಟೆಗೆ ವಿಜೃಂಭಣೆಯಿಂದ ಲೋಕೇಶ್ವರ ಮಹಾ ರಥೋತ್ಸವ ಜರಗುವದು. ರಾತ್ರಿ 10 ಗಂಟೆಗೆ ಜ್ಞಾನೇಶ್ವರ ನಾಟ್ಯ ಸಂಘ ಲೋಕಾಪುರ ಅವರಿಂದ ಸಿಡಿದೆದ್ದ ಸಹೋದರರು ಎಂಬ ನಾಟಕ ಪ್ರದರ್ಶನಗೊಳ್ಳುವದು. ಮಾ.3 ರಂದು ಕಲಶ ಇಳಿಸಲಾಗುವುದು. ಕುಸ್ತಿ, ಮಾನ ಪಾನ ಕಾರ್ಯಕ್ರಮ ಹಾಗೂ ರಾತ್ರಿ 9 ಗಂಟೆಗೆ ಮಹಾಂತೇಶ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ನಾಟಕ ಪ್ರದರ್ಶನ ನಡೆಯಲಿದೆ.

ಸ್ಪರ್ಧೆಗಳು: ೆ.28ರಂದು ಚಕ್ಕಡಿ ಸ್ಪರ್ಧೆ ಮತ್ತು ತೆರೆಬಂಡಿ ಸ್ಪರ್ಧೆ, ಮಾ.1ರಂದು ಸುತಬಂಡಿ ಸ್ಪರ್ಧೆ, ಮಾ.2ರಂದು ನಿಮಿಷದ ಚಕ್ಕಡಿ ಸ್ಪರ್ಧೆ, ಮಾ.3ರಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಹಾಗೂ ಕುಸ್ತಿ ಸ್ಪರ್ಧೆ ವಿಜೇತರಿಗೆ ದಿ.ಬಸವರಾಜ ಚನ್ನಪ್ಪ ಉದಪುಡಿ ಅವರ ಸ್ಮರಣಾರ್ಥ ಬಹುಮಾನ ವಿತರಣೆ ನಡೆಯಲಿದೆ.

ಈ ಭಾಗದ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರ ಆಗಮನದ ಜತೆಗೆ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳನಾಡು ರಾಜ್ಯಗಳಿಂದ ಭಕ್ತರ ಮಹಾಪೂರವೇ ಹರಿದು ಬರಲಿದೆ.