ಗಾವಡಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಲೋಕೇಶ್ ಅವರಿಗೆ ಸದಸ್ಯರು ಪುಷ್ಪ ಗುಚ್ಛ ನೀಡಿ ಅಭಿನಂದಿಸಿದರು. ಸುಮಿತ್ರಾ, ಶ್ರೀನಾಥ್, ಧನಲಕ್ಷ್ಮೀ, ಪ್ರದೀಪ್, ಮನು, ರವಿಶೆಟ್ಟಿ ಇದ್ದರು.  
ಜಿಲ್ಲೆ

ಗಾವಡಗೆರೆ ಗ್ರಾಪಂಗೆ ಲೋಕೇಶ್ ಅಧ್ಯಕ್ಷ

ಹುಣಸೂರು: ತಾಲೂಕಿನ ಗಾವಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.

ಗಾವಡಗೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಲೋಕೇಶ್ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಂತೋಷ್‌ಕುಮಾರ್ ಅಧ್ಯಕ್ಷರ ಅಯ್ಕೆಯನ್ನು ಪ್ರಕಟಿಸಿದರು. ಪಿಡಿಒ ಮಂಜುಳಾ, ಕಾರ್ಯದರ್ಶಿ ರಮೇಶ್ ಕರ್ತವ್ಯನಿರ್ವಹಿಸಿದರು.

ನಿಕಟಪೂರ್ವ ಅಧ್ಯಕ್ಷ ಪುಟ್ಟ ಶೋಭಾ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆದಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 13 ಸದಸ್ಯರಲ್ಲಿ 6 ಸದಸ್ಯರು ಗೈರಾಗಿದ್ದರೆ ಉಳಿದ 7 ಸದಸ್ಯರು ಹಾಜರಿದ್ದರು.

ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಶ್ರೀನಾಥ್, ಧನಲಕ್ಷ್ಮೀ, ಪುಟ್ಟ ಶೋಭಾ, ಪ್ರದೀಪ್, ರುಕ್ಮಾಂಗದ, ಜೆಡಿಎಸ್ ಮುಖಂಡರಾದ ದೇವನಾಯಕ, ಪ್ರದೀಪ್, ಮನು, ರವಿ ಶೆಟ್ಟಿ, ಮಂಜು, ಕುಮಾರ್ ಹಲವಾರು ಮುಖಂಡರು ಹಾಜರಿದ್ದರು.