Gavel on desk. Isolated with good copy space. Dramatic lighting. 
ಜಿಲ್ಲೆ

ಲಂಚದ ಆರೋಪ ಹೊತ್ತಿದ್ದ ಮೆಸ್ಕಾಂ ಜೆಇ ಖುಲಾಸೆ

ಮಂಗಳೂರು: ವಿದ್ಯುತ್ ಗುತ್ತಿಗೆದಾರನಿಂದ ಲಂಚದ ಹಣ ಸ್ವೀಕರಿಸಿರುತ್ತಾರೆ ಎಂಬ ಆರೋಪ ಹೊತ್ತಿದ್ದ ಬೈಕಂಪಾಡಿಯ ಮೆಸ್ಕಾಂ ಜೂನಿಯರ್ ಎಂಜಿನಿಯರ್ ರಾಘವ.ಡಿ ಎಂಬವರನ್ನು ಖುಲಾಸೆಗೊಳಿಸಿ ಮಂಗಳೂರಿನ ಲೋಕಾಯುಕ್ತ ನ್ಯಾಯಾಲಯ ತೀರ್ಪು ನೀಡಿದೆ.


ಮಂಗಳೂರಿನ ತೋಟ ಬೆಂಗ್ರೆಯ ಜಿತೇಶ್ ಎನ್.ಎಂ. ಎನ್ನುವವರು ವಿದ್ಯುತ್ ಗುತ್ತಿಗೆದಾರನಾಗಿದ್ದು, ಬೈಕಂಪಾಡಿ ಮೆಸ್ಕಾಂ ನ ಜೂನಿಯರ್ ಇಂಜಿನಿಯರ್ ರಾಘವ.ಡಿ ಎಂಬವರಲ್ಲಿ ಲೋಬೊ ಇಂಜಿನಿಯರಿಂಗ್ ವರ್ಕ್ಸ್‌ಗೆ ಹೆಚ್ಚುವರಿ ಲೋಡ್‌ಗಾಗಿ ಮತ್ತು ಗೊಡ್ವಿನ್ ಮೊಂತೇರೊರವರ ಹೊಸ ಉದ್ದಿಮೆಯನ್ನು ಪ್ರಾರಂಭಿಸಲು 20 ಎಚ್.ಪಿ. ಲೋಡ್ ಗಾಗಿ ಅರ್ಜಿ ಸಲ್ಲಿಸಿದಾಗ ಜೂನಿಯರ್ ಎಂಜಿನಿಯರ್‌ರವರು 5ಸಾವಿರ ರೂ. ಲಂಚದ ಬೇಡಿಕೆ ಇಟ್ಟಿರುತ್ತಾರೆ ಎಂದು ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕರಿಗೆ ದೂರು ನೀಡಿದ್ದರು.