ಜಿಲ್ಲೆ

ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಗೆ ಬಿಗ್ ಶಾಕ್ : ವಿಜಯೇಂದ್ರ ಸಂಬಂಧಿ ಯಾದಗಿರಿ ಡಿಎಚ್ ಒ ‌ಮಾನಕರ್ ಮನೆ ಮೇಲೆ ಲೋಕಾಯುಕ್ತ ದಾಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಯಾದಗಿರಿ DHO ಆಗಿರುವ ಡಾ ಪ್ರಭುಲಿಂಗ್ ಮಾನಕರ್‌ ಅವರ ಕಲಬುರಗಿಯ ಮನೆ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಅಲ್ಲದೆ ಯಾದಗಿರಿ ಕಚೇರಿ ಹಾಗೂ ಬಾಡಿಗೆ ಮನೆಯ ಮೇಲೂ ದಾಳಿ ನಡೆಸಿ ಶೋಧ ಮಾಡಲಾಗುತ್ತಿದೆ.

ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದ ಮನೆ ಮೇಲೆ ದಾಳಿ ಮಾಡಿದ್ದು ಜತೆಗೂ ಯಾದಗಿರಿಯ ಮನೆ, ಕಚೇರಿ ಹಾಗೂ ಕಲಬುರಗಿ ಸಮೀಪದ ಫಾರ್ಮ ಹೌಸ್ ಮೇಲೆ ಲೋಕಾಯುಕ್ತ ಎಸ್ ಪಿ ಕರ್ನುಲ್ ನೇತೃತ್ವದಲ್ಲಿ ಇನ್ನ್ ಸ್ಪೆಕ್ಟರ್ ರಾಜಶೇಖರ ಹಳಿಗೋಧಿ, ದ್ರುವತಾರಾ ಇತರರು ಕೂಡಿ ನಡೆಸಿದ್ದಾರೆ.

ಮಾನಕರ್ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಅವರ ಸಂಬಂಧಿ. ವಿಜಯೇಂದ್ರರ ಪತ್ನಿಯ ಸಹೋದರನ‌ ಮನೆ‌ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ‌ ಶೋಧ ನಡೆಸುತ್ತಿದ್ದಾರೆ.