ಮಂಡ್ಯ: ಕಾಮಗಾರಿ ಮಾಡಿರುವ ಬಿಲ್ ಬಿಡುಗಡೆಗೆ ಸಂಬಂಧಿಸಿದಂತೆ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ದೂರಿನ ಆಧಾರದ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ದಾಳಿ ನಡೆಸಿ ಸುಮಾರು ನಾಲ್ಕೂವರೆ ಗಂಟೆ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಸಮಯಾವಕಾಶ ಇಲ್ಲದ ಕಾರಣಕ್ಕೆ ಮಂಗಳವಾರವೂ ಪರಿಶೀಲನೆ ನಡೆಯಲಿದೆ.
ಕಾಮಗಾರಿಗೆ ಸಂಬಂಧಿಸಿದ ಬಿಲ್ ಬಿಡುಗಡೆ ಮಾಡುವ ವಿಚಾರದಲ್ಲಿ ಲೋಪವೆಸಗಲಾಗುತ್ತಿದೆ. ಮುಖ್ಯವಾಗಿ ಸಿನಿಯಾರಿಟಿ ನಿಯಮ ಉಲ್ಲಂಘಿಸಲಾಗುತ್ತಿದೆ.್ 2021 ರಲ್ಲಿ ಮಾಡಿರುವ ಕಾಮಗಾರಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಬದಲಿಗೆ 2024ರಲ್ಲಿ ಮಾಡಿರುವ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡುವ ಮೂಲಕ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಹಲವು ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ್ಮಧ್ಯಾಹ್ನ 3.30ರ ಸುಮಾರಿಗೆ ದಾಳ್ಿ ನಡೆಸಲಾಯಿತು. ರಾತ್ರಿ 8 ಗಂಟೆವರೆಗೂ ಪರಿಶೀಲನೆ ನಡೆಸಿ ಕೆಲವೊಂದು ಮುಖ್ಯವಾದ ಕಡತವನ್ನು ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲದೆ ಕಚೇರಿಗೆ ಬೀಗ ಹಾಕಿಸಿ ಪರಿಶೀಲನೆ ಮುಂದೂಡಲಾಗಿದೆ.
ಎಸ್ಪಿ ಸುರೇಶ್‌ಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಡಿವೈಎಸ್ಪಿ ಸುನೀಲ್ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಜಯರತ್ನಾ, ಸಿಬ್ಬಂದಿ ಶಂಕರ್, ಶರತ್, ಮಹದೇವ, ಮಹದೇವಸ್ವಾಮಿ, ನವೀನ, ಮನು, ರಾಮಲಿಂಗ ಇದ್ದರು.