ಕನಕಪುರ: ನಗರದ ಕನಕ ಆಸ್ಪತ್ರೆ ರಸ್ತೆಯಲ್ಲಿನ ಅಬಕಾರಿ ತನಿಖಾ ಅಧಿಕಾರಿಗಳ ವಲಯ ಕಚೇರಿ ಮೇಲೆ ರಾಮನಗರ ಜಿಲ್ಲಾ ಲೋಕಾಯುಕ್ತ ಪೋಲೀಸರು ಧೀಡೀರ್ ದಾಳಿ ನಡೆಸಿದ್ದಾರೆ.
ಗುರುವಾರ ನಗರದ ಕಚೇರಿಗೆ ನಾಲ್ವರು ಅಧಿಕಾರಿಗಳ ತಂಡ ಧಿಡೀರ್ ದಾಳಿ ನಡೆಸಿದೆ. ಕಚೇರಿಯಲ್ಲಿ ಅಧಿಕಾರಿಯೊಬ್ಬ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬೇಡಿಕೆ ಹಣ 15 ಸಾವಿರ ಹಣವನ್ನು ಕಚೇರಿ ಎದುರಿನ ಅಂಗಡಿಯಲ್ಲಿ ದೂರುದಾರ ನೀಡಿದ್ದು, ಈ ಹಣವನ್ನು ಪಡೆಯುವಾಗ ಧಿಡೀರ್ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ಅಬಕಾರಿ ಇಲಾಖೆಯಲ್ಲಿಯೇ ವಿಚಾರಣೆಗೆ ಒಳಪಡಿಸಿದ್ದಾರೆ.
ಲೋಕಾಯುಕ್ತ ಡಿ.ವೈ.ಎಸ್.ಪಿ ಗೌತಮ್, ಇನ್ಸ್‌ಪೆಕ್ಟರ್‌ಗಳಾದ ಲಕ್ಷ್ಮಣ್, ಸತೀಶ್ ಹಾಗೂ ಅನಂತರಾಮ್ ದಾಳಿಯಲ್ಲಿ ಭಾಗಿಯಾಗಿದ್ದರು.