ಜಿಲ್ಲೆ

ಲೋಕಾಯುಕ್ತ ಜನಸಂಪರ್ಕ ಸಭೆ

Avinash R

ಕಡಬ: ಕರ್ನಾಟಕ ಲೋಕಯುಕ್ತ ದ.ಕ ಜಿಲ್ಲಾ ವತಿಯಿಂದ ಕಡಬ ತಾಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಸಾರ್ವಜನಿಕ ಜನಸಂಪರ್ಕ ಸಭೆ ನಡೆಯಿತು. ಲೋಕಯುಕ್ತ ಎಸ್.ಪಿ.ನಟರಾಜ್ ಎಂ.ವಿ., ಲೋಕಯುಕ್ತ ಪೊಲೀಸ್ ನಿರೀಕ್ಷಕರಾದ ಅಮನುಲ್ಲಾ ಎ., ಚಂದ್ರಶೇಖರ ಅಹವಾಲು ಸ್ವೀಕರಿಸಿದರು.

ಲೋಕಾಯುಕ್ತ ಸಿಬ್ಬಂದಿ ವಿವೇಕ್, ಪಂಪಣ್ಣ, ದುಂಡಪ್ಪ, ಮಹೇಶ್ ಉಪಸ್ಥಿತರಿದ್ದರು. ಕಂದಾಯ ಸಂಬಂಧಪಟ್ಟಂತೆ 11 ಅರ್ಜಿಗಳು ಸ್ವೀಕೃತವಾಗಿವೆ. ವಿವಿಧ ಇಲಾಖೆಗಳ 9 ಅರ್ಜಿಗಳು ಲೋಕಾಯುಕ್ತ ವಿಚಾರಣೆಗೆ ಒಳಪಟ್ಟಿದೆ, ಇನ್ನುಳಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ದೂರು ಅರ್ಜಿಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು.

ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.