ಜಿಲ್ಲೆ

ಅರಣ್ಯಾಧಿಕಾರಿ ಮನೆ ಮೇಲೆ ಲೋಕಾ ದಾಳಿ

Davangere - Desk - Ganesh M K

ಚನ್ನಗಿರಿ: ವಲಯ ಅರಣ್ಯಾಧಿಕಾರಿ ಸತೀಶ್ ಅವರ ಕಚೇರಿ, ವಸತಿಗೃಹ ಹಾಗೂ ಶಿವಮೊಗ್ಗದ ಮನೆಗೆ ಏಕಕಾಲದಲ್ಲಿ ದಾವಣಗೆರೆ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದು ಗುರುವಾರ ತನಿಖೆ ಪ್ರಾರಂಭಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಮಲ್ಲಪ್ಪ ಶಿವಪ್ಪ ಕೋಲ್ಲಾಪುರೆ ಮಾರ್ಗದರ್ಶನದಲ್ಲಿ ಸಿಪಿಐ ಮಧುಸೂಧನ್, ಪ್ರಭು ಸೂರ್ಯನ್ ಹಾಗೂ ಸಿಪಿಐ ರಾಜು ರಾಷ್ಟ್ರಪತಿ ಬೆಳಗ್ಗೆ 6 ಗಂಟೆಗೆ ಸತೀಶ್ ಕೆಲಸ ಮಾಡುವಂತ ಚನ್ನಗಿರಿ ಅರಣ್ಯ ವಲಯ ಕಚೇರಿ ಹಾಗೂ ವಸತಿಗೃಹ, ಶಿವಮೊಗ್ಗ ಡಾಲರ್ಸ್‌ ಕಾಲನಿಯ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬೆಲೆ ಬಾಳುವ ಮನೆ, ನಾಲ್ಕು ಕಾರುಗಳು, ಎರಡು ಬೈಕ್‌ಗಳು ಮತ್ತು ಸಾಕಷ್ಟು ದಾಖಲೆಗಳು ದೊರೆತಿದೆ. ಚನ್ನಗಿರಿ ಕಚೇರಿಯಲ್ಲಿ ಎರಡು ಖಾಲಿ ಚೆಕ್‌ಗಳು ದೊರೆತಿದೆ.

ಕಾರ್ಯಾಚರಣೆ ಸಮಯದಲ್ಲಿ ಸತೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.