ಮುದ್ದೇಬಿಹಾಳ ತಾಪಂ ಸಭಾ ಭವನದಲ್ಲಿ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಅವರು ತಾಲೂಕು ಮಟ್ಟದ ಅ-ಕಾರಿಗಳ ಸಭೆ ನಡೆಸಿದರು. ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಇದ್ದರು. 
ಜಿಲ್ಲೆ

ಲೋಕಾಯುಕ್ತ ನ್ಯಾ.ಬಿ.ಎಸ್​.ಪಾಟೀಲ ಪ್ರವಾಸ

ಗಿರೀಶ ಸಗರ

ಮುದ್ದೇಬಿಹಾಳ: ಲೋಕಾಯುಕ್ತ ನ್ಯಾ. ಬಿ.ಎಸ್​.ಪಾಟೀಲ ಪಡೇಕನೂರ ಜ.13 ರಂದು ಪಟ್ಟಣಕ್ಕೆ ಆಗಮಿಸಿ ತಾಲೂಕಿನ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ತಿಳಿಸಿದ್ದಾರೆ.

ಇಲ್ಲಿನ ತಾಪಂ ಸಭಾ ಭವನದಲ್ಲಿ ಲೋಕಾಯುಕ್ತರ ಪ್ರವಾಸ ಹಿನ್ನೆಲೆ ಬುಧವಾರ ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಅಧ್ಯತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲ ಇಲಾಖೆಗಳ ವಿರುದ್ಧ ಅಹವಾಲು, ದೂರು ಸಲ್ಲಿಕೆಯಾಗಿವೆ. ಈಗಾಗಲೇ ಲೋಕಾಯುಕ್ತರ ಬಳಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಯಾವುದೇ ಅರ್ಜಿಯ ಮಾಹಿತಿ ಕೇಳಿದರೂ ಕೊಡಲು ಸಿದ್ಧ್ದರಿರಬೇಕು ಎಂದು ತಿಳಿಸಿದರು.

ತೊಗರಿ ಬೆಳೆ ಕುರಿತು ಅನೇಕ ರೈತರು ಲೋಕಾಯುಕ್ತರಿಗೆ ದೂರು ಸಲ್ಲಿಸಿದು,್ದ ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆ, ಮಾಹಿತಿ ಕೃಷಿ ಇಲಾಖೆ ಸಿದ್ಧಪಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಸಲಹೆ ಸೂಚನೆ ನೀಡಿ ಎಲ್ಲರೂ ತಯಾರಿಯಲ್ಲಿರುವಂತೆ ಸೂಚಿಸಿದರು.

ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್​ ಜಾಧವ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ, ೇತ್ರ ಶಿಣಾಧಿಕಾರಿ ಬಿ.ಎಸ್​.ಸಾವಳಗಿ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪಿಡಬ್ಲೂಡಿ ಎಇಇ ಸಂಗಮೇಶ ಶಿವನಗುತ್ತಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಸಂತಿ ಮಠ, ಬಿಸಿಎಸ್​ ಅಧಿಕಾರಿ ಶಿವಲೀಲಾ ಕೊಣ್ಣೂರ, ಅರದಾಸೋಹ ಎಡಿ ಎಂ.ಎಂ.ಬೆಳಗಲ್ಲ, ಲೋಕಾಯುಕ್ತ ಇನ್ಸಪೆಕ್ಟರ್​ ಆನಂದ ಠಕ್ಕನವರ್​ ಉಪಸ್ಥಿತರಿದ್ದರು.

12ರಂದು ಚಿತ್ರದುರ್ಗದಿಂದ ಸ್ವಗ್ರಾಮ ಮುದ್ದೇಬಿಹಾಳ ತಾಲೂಕು ಪಡೇಕನೂರಕ್ಕೆ ಲೋಕಾಯುಕ್ತರು ಆಗಮಿಸಿ ವಾಸ್ತವ್ಯಮಾಡುವರು. 13ರಂದು ಬೆಳಿಗ್ಗೆ 9ಕ್ಕೆ ಮುದ್ದೇಬಿಹಾಳದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ, ಬಾಕಿ ಪ್ರಕರಣಗಳ ವಿಚಾರಣೆ. ಮದ್ಯಾಹ್ನ 1.30ಕ್ಕೆ ಆಲಮಟ್ಟಿಯಲ್ಲಿ ಊಟದ ನಂತರ ನಿಡಗುಂದಿ, ಬಾಗಲಕೋಟ ಜಿಲ್ಲೆ ಕೂಡಲಸಂಗಮ ಸಾರ್ವಜನಿಕ ಕಚೇರಿ, ಆಸ್ಪತ್ರೆ, ಆರೋಗ್ಯ ಕೇಂದ್ರ, ಸರ್ಕಾರಿ ಹಾಸ್ಟೆಲ್​ ತಪಾಸಣೆ. ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ. 14ರಂದು ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ನಿರ್ಗಮಿಸುವರು.