ಜಿಲ್ಲೆ

ಬಯಲು ಬಹಿರ್ದೆಸೆ ತಡೆಗೆ ದಂಡೋಪಾಯ ಅಗತ್ಯ

ಮಂಜುನಾಥ ಅಂಗಡಿ

ಧಾರವಾಡ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಯಲು ಬಹಿರ್ದೆಸೆ ಇನ್ನೂ ಇದೆ. ಪ್ರತಿ ಮನೆಗೊಂದು ಶೌಚಗೃಹ ನಿರ್ಮಿಸಿದ್ದರೂ ಬಯಲು ಬಹಿರ್ದೆಸೆ ನಿಂತಿಲ್ಲ. ಗ್ರಾಮೀಣ ಜನತೆಗೆ ಹೊರಗಡೆ ಹೋಗುವುದು ರೂಢಿಯಾಗಿದೆ. ಇದನ್ನು ತಡೆಯಲು ದಂಡೋಪಾಯ ಆಂದೋಲನ ಅಗತ್ಯ. ಬಯಲು ಬಹಿರ್ದೆಸೆಗೆ ಹೋಗುವ ಕುಟುಬಗಳಿಗೆ ಸಿಗುವ ವಿವಿಧ ಸರ್ಕಾರಿ ಸವಲತ್ತುಗಳನ್ನು ಬಂದ್ ಮಾಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೂಚಿಸಿದರು.

  • ಉದ್ಯೋಗ ಖಾತ್ರಿ ತಪ್ಪಿತಸ್ಥರಿಗೆ ಬಿಸಿ: ತಾಲೂಕಿನ ತಡಕೋಡ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದ ದೂರು ಬಂದಿದೆ. ಒಂದೇ ಕಾಮಗಾರಿಗೆ ೪ ಬಾರಿ ಹಣ ಎತ್ತಲಾಗಿದೆ. ಖೊಟ್ಟಿ ಕೂಲಿ ಕಾರ್ಮಿಕರನ್ನು ಸೃಷ್ಟಿಸಿ ಅವರ ಖಾತೆಗೆ ಹಣ ಹಾಕಿಸಿ ಅವರಿಂದ ಮರಳಿ ಹಣ ಪಡೆದಿರುವ ದೂರು ಬಂದಿದೆ. ಇದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿಯ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದರು. ಈ ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸುವ ಕೆಲಸವಾಗಲಿದೆ ಎಂದರು.