ಕಾರವಾರ: ನಿವೃತ್ತ ಯೋಧರಿಗೆ ಭೂಮಿ ಮಂಜೂರಿ ಮಾಡುವ 150 ಕ್ಕೂ ಅಽಕ ಅರ್ಜಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಈಗ ಜಿಲ್ಲೆಯ ಎಸಿ ಹಾಗೂ ತಹಸೀಲ್ದಾರ್‌ಗಳಿಗೆ ಕಂಠಕವಾಗಿದೆ.
ಮಾಜಿ ಸೈನಿಕರಿಗೆ ಭೂಮಿ ನೀಡಲು ನಿರ್ಲಕ್ಷ್ಯ ವಹಿಸಿದ ಬಗ್ಗೆ ಲೋಕಾಯುಕ್ತ ರಾಜ್ಯದೆಲ್ಲೆಡೆ ಎಸಿ ಹಾಗೂ ತಹಸೀಲ್ದಾರ್‌ಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿದ್ದು ಯರ‍್ಯಾರ ಬಳಿ ಎಷ್ಟು ಅರ್ಜಿಗಳು ಬಾಕಿ ಇವೆ ಹಾಗೂ ಭೂಮಿ ಮಂಜೂರಿಗೆ ವಿಳಂಬ ಮಾಡಿದ್ದೇಕೆ ಎಂದು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಲೋಕಾಯುಕ್ತ ಕಚೇರಿ ಸೂಚಿಸಿತ್ತು. ಆದರೆ, ನಂತರ ದಿನಾಂಕ ಮುಂದೂಡಿದ್ದು, ಸೆ.23 ರ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.
ನಿವೃತ್ತ ಯೋಧರಿಗೆ 2 ಹೆಕ್ಟೇರ್‌ವರೆಗೆ ಖುಷ್ಕಿ ಭೂಮಿ, 1 ಹೆಕ್ಟೇರ್‌ಗೆ ಮೀರದಂತೆ ತರಿ ಅಥವಾ ಭಾಗಾಯ್ತ ಭೂಮಿಯನ್ನು ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಅವಕಾಶವಿದೆ. ಸಂಬಂಧಪಟ್ಟ ತಾಲೂಕಿನಲ್ಲಿ ಅಥವಾ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಸೈನಿಕರಿಗಾಗಿ ಮೀಸಲಿಟ್ಟ ಭೂಮಿ ಅಥವಾ ಕಂದಾಯ ಭೂಮಿ ಲಭ್ಯವಿಲ್ಲದೇ ಹೋದಲ್ಲಿ ನಗರ ಭಾಗದಲ್ಲಿ ಗರಿಷ್ಠ 1200 ಚದರ ಅಡಿ ವಿಸ್ತೀರ್ಣದ ಅಥವಾ ಗ್ರಾಮೀಣ ಭಾಗದಲ್ಲಾದರೆ 2400 ಚದರ ಅಡಿ ನಿವೇಶನ ನೀಡಲು ಅವಕಾಶವಿದೆ.
ಪರ್ಯಾಯ ಅವಕಾಶವಿದೆ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈನಿಕರಿಗಾಗಿ ಮೀಸಲಿಟ್ಟ ಕಂದಾಯ ಭೂಮಿಗಳು ಕಳೆದ 15 ವರ್ಷಗಳ ಹಿಂದಿನಿAದಲೇ ಲಭ್ಯವಿಲ್ಲ. ಸೈನಿಕರಿಗೆ ನೀಡಲು ಭೂಮಿ ಲಭ್ಯವಿಲ್ಲದ ಬಗ್ಗೆ ಸಂಬಂಧಪಟ್ಟ ತಹಸೀಲ್ದಾರರು ಘೋಷಣೆ ಮಾಡಬೇಕು.ನಂತರ ಭೂಮಿಯ ಬದಲು ಹಣ ನೀಡಲು ಅವಕಾಶವಿದೆ. ಆದರೆ, ತಹಸೀಲ್ದಾರ್‌ಗಳು ಅರ್ಜಿಗಳನ್ನು ಹಾಗೆಯೇ ಇಟ್ಟುಕೊಂಡಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ನೋಟಿಸ್‌ಗೆ ಉತ್ತರ ನೀಡಿದ ಬಳಿಕ ವಿಚಾರಣೆ ಪ್ರಾರಂಭವಾಗಲಿದೆ ಎಂದು ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ತಿಳಿಸಿದ್ದಾರೆ.