ಶಿವನಂದಿ ರೂಪದ ವಿಶೇಷ ಬುತ್ತಿ 
ಜಿಲ್ಲೆ

ಲೋಕೇಶ್ವರನಿಗೆ ಶಿವನಂದಿ ರೂಪದ ವಿಶೇಷ ಬುತ್ತಿ ಪೂಜೆ

ಬಾಗಲಕೋಟೆ: ಐತಿಹಾಸಿಕ‌ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ದೇಗುಲ‌ ಲೋಕೇಶ್ವರ ದೇವಾಲಯ. ಇದು ಮುಧೋಳ‌ ತಾಲೂಕಿನ ಲೋಕಾಪುರ ಪಟ್ಟಣದಲ್ಲಿದೆ.ಈ ದೇವಾಲಯದಲ್ಲಿ ನಿತ್ಯ ಶಿವನಿಗೆ ವಿಶೇಷ ಪೂಜೆ ,ಪುನಸ್ಕಾರ ನೆರವೇರಿಸಲಾಗುತ್ತದೆ. ಹಾಗೆ ಲೋಕದೊಡೆಯ ಲೋಕೇಶ್ವರನಿಗೆ ಕಲಾರ್ಚಕರಾದ ಕಂಟಯ್ಯ ಪೂಜಾರಿ ಅವರು ಶಿವನಂದಿ ರೂಪದ ವಿಶೇಷ ಬುತ್ತಿ ಪೂಜೆಯೊಂದಿಗೆ ಕಂಗೊಳಿಸುವಂತೆ ಮಾಡಿದ್ದಾರೆ. ಭಕ್ತಾದಿಗಳು ನಿತ್ಯ ಆಗಮಿಸಿ ಲೋಕೇಶ್ವರನ ಕೃಪಾಶೀರ್ವಾದ ಪಡೆದು ಪುನೀತರಾಗುತ್ತಿದ್ದಾರೆ.