ಕೊಕ್ಕರ್ಣೆ: ಗರಿಕೇಮಠ ಶ್ರೀ ಅರ್ಕಗಣಪತಿ ಕ್ಷೇತ್ರದಲ್ಲಿ ಆ.31, ಸೆ.1ರಂದು ದೇವಸ್ಥಾನ ಮುಖ್ಯಸ್ಥ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ದೀಪೇಶ್ ಎಂ.ದೊಡಿಯಾ ಸಿಎ ಲೈಸಿಸ್ಟರ್ ಯು.ಕೆ. ಸೇವಾರ್ಥ ಲೋಕಕಲ್ಯಾಣಾರ್ಥವಾಗಿ ಲಕ್ಷ ಲಿಂಗಾರ್ಚನ ವಿಧಿ ನೆರವೇರಲಿದೆ.
ಆ.31ರಂದು ಬೆಳಗ್ಗೆ 7 ಗಂಟೆಗೆ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಗೋಪೂಜೆ, ಕೈಲಾಸ ಪ್ರಸ್ತಾರ ನಿರ್ಮಾಣ, ನ್ಯಾಸಾದಿಗಳು, ಲಕ್ಷ ಲಿಂಗಗಳ ಸ್ಥಾಪನೆ, ಶ್ರೀ ದೇವತಾ ಆವಾಹನೆ, ತ್ರಿಕಾಲ ಪೂಜೆ, ಲಘುನ್ಯಾಸ ಪೂರ್ವಕ ರುದ್ರಪಾರಾಯಣ, ಕಲ್ಪೋಕ್ತ ಪೂಜೆ, ಬಿಲ್ವಾರ್ಚನೆ, ತಿಲಾರ್ಚನೆ, ಭಸ್ಮಾರ್ಚನೆ, ಸಹಸ್ರನಾಮ ಪೂಜೆ, ಸಂಜೆ 6ರಿಂದ ಪ್ರದೋಷ ಪೂಜೆ, ರುದ್ರತ್ರಿಶತೀ ಅರ್ಚನೆ, ಮಂಗಳಾರತಿ, 1ರಂದು ಲಕ್ಷ ಲಿಂಗಾರ್ಚನೆ, ಆವರಣಾರ್ಚನೆ, ಮಹಾನ್ಯಾಸ ಪೂರ್ವಕ ರುದ್ರಪಾರಾಯಣ, ಶತಕಲಶಾಭಿಷೇಕ, ರುದ್ರಯಾಗ, ಲಕ್ಷಲಿಂಗಪೂಜಾವೃತ ಉದ್ಯಾಪನಾ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ಜರುಗಲಿದೆ ಎಂದು ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.