ಜಿಲ್ಲೆ

ಲೋಕಕಲ್ಯಾಣಾರ್ಥ ದೀಪೋತ್ಸವ ನಾಳೆಯಿಂದ

ಸಿರಗುಪ್ಪ: ಲೋಕ ಕಲ್ಯಾಣಾರ್ಥ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನ.2ರಿಂದ ಒಂದು ತಿಂಗಳವರೆಗೆ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ಶ್ರೀನಿವಾಸ ರಾವ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.2ರಂದು ಕರ್ಚೇಡು ಮಲ್ಲಪ್ಪ ತಾತನ ಮಠದ ಅಶ್ವತ್ಥಾಮ ತಾತ ಚಾಲನೆ ನೀಡುವರು. ನಾಡಿನ ರೈತರ ಶ್ರೇಯೋಭಿವೃದ್ಧಿ. ಜನರ ಒಳಿತು, ನೆಮ್ಮದಿಗಾಗಿ ನ.2 ರಿಂದ ಡಿ.2 ರವರೆಗೆ ಪ್ರತಿದಿನ ಸಂಜೆ 3950 ದೀಪಗಳನ್ನು ಬೆಳಗಿಸಲು ಸಂಕಲ್ಪ ಮಾಡಿದ್ದೇವೆ. ಪ್ರತಿವರ್ಷ ತಾಲೂಕು ಮೈದಾನದಲ್ಲಿ ಲಕ್ಷ ದೀಪೋತ್ಸವ ಮಾಡುತ್ತಿದ್ದೆವು. ಹಿಂದಿನ ವರ್ಷ ದೇವಸ್ಥಾನದಲ್ಲಿ 5100 ದೀಪಗಳನ್ನು ಬೆಳಗಿಸಿದ್ದೆವು.

ಈ ವರ್ಷ ಲೋಕ ಕಲ್ಯಾಣಾರ್ಥ 1,18,500 ದೀಪ ಬೆಳಗಿಸುವ ಉದ್ದೇಶ ಹೊಂದಿದ್ದು, ಭಕ್ತರು ಭಾಗವಹಿಸಬೇಕು ಎಂದು ಕೋರಿದರು. ಟ್ರಸ್ಟ್ ಕಾರ್ಯದರ್ಶಿ ಕೋಟಿರೆಡ್ಡಿ, ಉಪಾಧ್ಯಕ್ಷ ವಿ. ನಾಗರಾಜ, ಖಜಾಂಚಿ ಬಿ.ವಿ.ಶ್ರೀರಾಮ, ಎ.ವಿ.ಪ್ರಸಾದ್, ಗರ್ಜಪ್ಪ, ರಾಧೇಶ್ಯಾಮ್, ಚಿಲಕನಟ್ಟಿ ಗುರುರಾಜಸ್ವಾಮಿ, ಸಿ.ಎಚ್.ಶ್ರೀನಿವಾಸರಾವ್, ಶಿರುದ್ರಗೌಡ, ಬಿ.ತಿರುಮಲಯ್ಯಸ್ವಾಮಿ ಇತರರಿದ್ದರು.