ಜಿಲ್ಲೆ

ಆರ್ ಟಿಓ ಕಚೇರಿ ಮೇಲೆ ಲೋಕಾ ದಾಳಿ

ಗಂಗಾಧರ ಬಿ ವಿ

ರಾಮನಗರ: ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ ಟಿಓ) ಮೇಲೆ ಜಿಲ್ಲಾ ಲೋಕಾಯುಕ್ತ ಪೋಲೀಸರು ಶುಕ್ರವಾರ ಧಿಡೀರ್​ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.

ಶುಕ್ರವಾರ ಮಧ್ಯಾಹ್ನ ಆರ್​ಟಿಓ ಕಚೇರಿಯಲ್ಲಿನ ಕಡತ ಪರಿಶೀಲನೆಯಲ್ಲಿ ಲೋಕಾಯುಕ್ತ ಪೋಲೀಸರು ತೊಡಗಿದ್ದರು. ಲೋಕಾಯುಕ್ತ ಎಸ್ಪಿ ಸ್ನೇಹ ಮತ್ತು ತಂಡ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ಲೋಕಾಯುಕ್ತ ಎಸ್ಪಿ ಸ್ನೇಹ, ಲೋಕಾಯುಕ್ತ ನೀಡಿದ ಸೂಚನೆ ಹಿನ್ನೆಲೆಯಲ್ಲಿ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸುತ್ತಿದ್ದೇವೆ ಎಂದಷ್ಟೇ ಉತ್ತರಿಸಿ ಬೇರೆ ಮಾಹಿತಿ ಹಂಚಿಕೊಳ್ಳಲಿಲ್ಲ.

ಈ ಹಿಂದೆಯೂ ದಾಳಿ: ನಕಲಿ ಬೋನೋಫೈಡ್  ಪ್ರಮಾಣ ಪತ್ರಗಳನ್ನು ಸೃಷ್ಠಿ ಮಾಡಿ ಜಪ್ತಿಯಾದ ಮತ್ತು ಹಳೇಯ ಟ್ರ್ಯಾಕ್ಟರ್ ಗಳಿಗೆ ನೋಂದಣಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ರಾಮನಗರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರ್​ಇಓ ಆಗಿದ್ದ ಶಿವಕುಮಾರ್​ ಹಾಗೂ ಮಧ್ಯಮರ್ತಿ ಸತೀಶ್​ ಎಂಬಾತನನ್ನು ಬಂಧಿಸಲಾಗಿತ್ತು.

ಹಳೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಮತ್ತೆ ದಾಳಿ ನಡೆದಿದೆ. ಕಚೇರಿಯಲ್ಲಿ ಮತ್ತೆ ನಕಲಿ ದಾಖಲೆ ಮೇರೆಗೆ ವಾಹನಗಳ ನೋಂದಣಿ ಹಾಗೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಲೋಕಾಯುಕ್ತಕ್ಕೆ ಹೋಗಿರುವ ಹಿನ್ನಲೆಯಲ್ಲಿ ಧಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗೌತಮ್​ ಹಾಗೂ ಸಿಬ್ಬಂದಿ ಇದ್ದರು.