ಜಿಲ್ಲೆ

ಹುಬ್ಬಳ್ಳಿ ತಲುಪಿದ ಲೋಕ ಸ್ವರಾಜ್ ಪಾದಯಾತ್ರೆ,  ಮಹಿಳಾ ವಿದ್ಯಾಪೀಠದಲ್ಲಿ ಸಮಾರೋಪ

Dharwada - Basavaraj Idli

ಹುಬ್ಬಳ್ಳಿ: ಡಿಸೆಂಬರ್ 28ರಿಂದ ಆರಂಭಗೊಂಡ ಲೋಕ ಸ್ವರಾಜ್ ಪಾದಯಾತ್ರೆಯು ಗುರುವಾರ ಇಲ್ಲಿಯ ವಿದ್ಯಾನಗರ ಮಹಿಳಾ ವಿದ್ಯಾಪೀಠದಲ್ಲಿ ಬಂದು ಯಶಸ್ವಿಯಾಗಿ ಸಮಾರೋಪಗೊಂಡಿತು. ಪಾದಯಾತ್ರೆಯು 600 ಕಿಲೋಮೀಟರ್ ದೂರ ಮತ್ತು 34 ದಿನಗಳವರೆಗೆ ನಡೆಯಿತು. 49 ಹಳ್ಳಿಗಳಲ್ಲಿ ತಂಗಿತ್ತು.

ಪಾದಯಾತ್ರೆಯ ಮಾರ್ಗ ಮಧ್ಯ ತಂಗಿದ ಸ್ಥಳಗಳಲ್ಲಿ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು ಯಾತ್ರಾರ್ಥಿಗಳಿಗೆ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ಗ್ರಾಮ ಪಂಚಾಯತ್ ಮತ್ತು ಶಾಲೆಗಳಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಿದರು.

ಸಾರ್ವಜನಿಕರ ಸಹಕಾರದಿಂದ "ಲೋಕಸ್ವರಾಜ ಪಾದಯಾತ್ರೆ' ಯಶಸ್ವಿಯಾಯಿತು.

ಇಲ್ಲಿಯ ವಿದ್ಯಾನಗರ ಮಹಿಳಾ ವಿದ್ಯಾಪೀಠ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರೋಪದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಿರಣ ಮೂಗಬಸವ ಮಾತನಾಡಿ, ಐಕ್ಯತೆ, ಸತ್ಯ, ಅಹಿಂಸಾ ಮತ್ತು ಸಮಾನತೆಯ ಮಾದರಿಯಾಗಿ ಸಾಗಿದ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಅವರು ನೆನಪಿಸಿಕೊಂಡರು. ಯಾತ್ರೆ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಸೆಂಟ್ರಲ್ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಗನಿ ವಲಿಅಹ್ಮದ್, ಉಣಕಲ್ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶರೀಫ ಗರಗದ, ಕೆಪಿಸಿಸಿ ಸದಸ್ಯ ಡಿ.ಎಂ. ದೊಡ್ಡಮನಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ, ಡಿಸಿಸಿ ಖಜಾಂಚಿ ಸಂಗಮೇಶ್ವರ ಗೌರಕ್ಕನವರ, ಖಾಶಿಮ್ ಕುಡಲಗಿ, ಅಹ್ಮದ್ ರಜಾ ಹುಡೇದ, ವಿ.ಜಿ. ಕೊಂಗವಾಡ, ರಫೀಕ ಚವ್ಹಾಣ, ಯಶವಂತ ಪಾಟೀಲ್, ಶಾಹೀದ ಶಿರಹಟ್ಟಿ, ಕಿಶೋರ ಶಿರಸಂಗಿ, ಸೋಮಶೇಖರ್ ಸವದತ್ತಿ, ಶಂಕರ ಮಲಕಣ್ಣವರ ಇತರರು ಉಪಸ್ಥಿತರಿದ್ದರು.