ಮಂಡ್ಯ: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂತೆಯೇ ಅಭ್ಯರ್ಥಿಗಳ ಹಣೆಬರಹವಿರುವ ಸ್ಟ್ರಾಂಗ್ ಕೊಠಡಿಯ ಬಾಗಿಲನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ತೆರೆಯಲಾಯಿತು.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್ಗಳಂತೆ ಒಟ್ಟು 123 ಟೇಬಲ್‌ಗಳಲ್ಲಿ ಒಟ್ಟು 151 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ. ಮಳವಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 20 ಸುತ್ತು, ಮದ್ದೂರು 19 ಸುತ್ತು, ಮೇಲುಕೋಟೆ 19 ಸುತ್ತು, ಮಂಡ್ಯ 19 ಸುತ್ತು, ಶ್ರೀರಂಗಪಟ್ಟಣ 18 ಸುತ್ತು, ನಾಗಮಂಗಲ 19 ಸುತ್ತು, ಕೆ.ಆರ್.ಪೇಟೆ 19 ಸುತ್ತು, ಕೆ.ಆರ್.ನಗರ 18 ಸುತ್ತುಗಳಲ್ಲಿ ಮತ ಎಣಿಕೆ ಹಾಗೂ ನೆಲಮಹಡಿಯ 102 ಮತ್ತು 107ರಲ್ಲಿ ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಮತ ಎಣಿಕೆ ಕಾರ್ಯವು 11 ಟೇಬಲ್‌ಗಳಲ್ಲಿ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಮೊದಲು ಅಂಚೆ ಮತಪತ್ರದ ಕೊಠಡಿಯನ್ನು ತೆರೆದು ಎಣಿಕೆ ಮಾಡಲಾಗುವುದು. ನಂತರ ಇತರೆ ಕೊಠಡಿಗಳನ್ನು ತೆರೆದು 8 ಗಂಟೆಯಿಂದ ಇವಿಎಂ ಮತಯಂತ್ರದ ಮತಗಳನ್ನು ಎಣಿಕೆ ನಡೆಯಲಿದೆ.
ಇನ್ನು ಮತ ಎಣಿಕೆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಎಸ್ಪಿ-2, ಡಿಎಸ್‌ಪಿ-3, ಪಿಐ-13, ಪಿಎಸ್‌ಐ-32, ಎಎಸ್‌ಐ-51, ಎಚ್‌ಸಿಪಿಸಿ-337, ಡಬ್ಲುೃಪಿಸಿ-30, ಡಿಎಆರ್-40, ಕೆಎಸ್‌ಆರ್‌ಪಿ-30 ಒಟ್ಟು 539 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.