ಜಿಲ್ಲೆ

ನಾಮಪತ್ರ ವಾಪಸ್ ಪಡೆಯುವ ಸಮಯ ಮುಕ್ತಾಯ: ಮಂಡ್ಯದ ಅಂತಿಮ ಕಣದಲ್ಲಿ ಉಳಿದವರು ಯಾರು, ಯಾರಿಗೆ ಯಾವ ಚಿಹ್ನೆ ಸಿಕ್ಕಿದೆ ಓದಿ..!!!

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಐವರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಇದರೊಂದಿಗೆ ಅಂತಿಮ ಕಣದಲ್ಲಿ 14 ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಚಿಕ್ಕನಂಜಾಚಾರಿ, ಕೆ.ಶಿವಾನಂದ, ಲೋಲ, ಯೋಗೇಶ್, ಶಿವನಂಜಪ್ಪ ಎಂಬುವರು ತಮ್ಮ ನಾಮಪತ್ರ ಹಿಂಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ಅಂತಿಮ ಕಣದಲ್ಲಿವರ ಪೈಕಿ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.

ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್), ವೆಂಕಟರಮಣೇಗೌಡ(ಸ್ಟಾರ್ ಚಂದ್ರು(ಕಾಂಗ್ರೆಸ್), ಎಸ್.ಶಿವಶಂಕರ್(ಬಿಎಸ್ಪಿ) ಮತ್ತು ನೋಂದಾಯಿತ ರಾಜಕೀಯ ಪಕ್ಷದ ಅಭ್ಯರ್ಥಿಗಳಾದ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಕೆ.ಆರ್.ಚಂದ್ರಶೇಖರ್(ಬ್ಯಾಟರಿ ಟಾರ್ಚ್), ಕರುನಾಡ ಪಾರ್ಟಿ ಬಿ.ಪಿ.ಬೂದಯ್ಯ(ಬ್ಯಾಟ್ಸ್‌ಮನ್), ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಎಚ್.ಡಿ.ರೇವಣ್ಣ(ಡೀಸೆಲ್ ಪಂಪ್), ಉತ್ತಮ ಪ್ರಜಾಕೀಯ ಪಾರ್ಟಿಯ ಎಸ್.ಲೋಕೇಶ್(ಆಟೋ ರಿಕ್ಷಾ), ಪಕ್ಷೇತರ ಅಭ್ಯರ್ಥಿಗಳಾದ ಎಸ್.ಅರವಿಂದ್(ಗ್ಯಾಸ್ ಸಿಲಿಂಡರ್), ಚನ್ನಮಾಯಿಗೌಡ(ಹೊಲಿಗೆ ಯಂತ್ರ), ಕೆ.ಚಂದನ್‌ಗೌಡ(ಟ್ರಕ್), ಎನ್.ಬಸವರಾಜು(ತೆಂಗಿನತೋಟ), ಸಿ.ಟಿ.ಬೀರೇಶ್(ದೂರದರ್ಶನ), ಡಿ.ರಾಮಯ್ಯ(ಕಬ್ಬು ರೈತ) ಮತ್ತು ಎನ್.ರಂಜಿತಾ(ವಜ್ರ) ಅಂತಿಮದಲ್ಲಿ ಉಳಿದಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.