ಜಿಲ್ಲೆ

13ರಂದು ಲೋಕ ಅದಾಲತ್

ಲಲಾಟಾಕ್ಷ ಎಸ್

ಅರಸೀಕೆರೆ: ತ್ವರಿತಗತಿಯಲ್ಲಿ ನ್ಯಾಯದಾನ ನೀಡಬೇಕು ಎಂಬ ಉದ್ದೇಶದಿಂದ ಜೂ.13ರಂದು ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್ ಕುಮಾರ್ ಡಿ.ವಡಿಗೇರ ಹೇಳಿದರು.


ನಗರದ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ರಾಜಿ, ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಮೀನು ವಿವಾದ, ಕೌಟುಂಬಿಕ ಕಲಹ, ಚೆಕ್ ಬೌನ್ಸ್, ಬ್ಯಾಂಕ್ ವಹಿವಾಟು ಸೇರಿದಂತೆ ಹಲವು ವಿವಾದಗಳನ್ನು ಪರಸ್ಪರ ಸಂಧಾನದ ಮೂಲಕ ತೀರ್ಮಾನ ಮಾಡಿಕೊಳ್ಳಬಹುದಾಗಿದೆ. ಇದರಿಂದ ಅನಗತ್ಯ ಸಮಯ, ಶ್ರಮ, ಹಣವೂ ಉಳಿತಾಯವಾಗಲಿದ್ದು ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ನ್ಯಾಯಾಧೀಶರಾದ ವಿ.ಭಂಡಾರಿ, ಎಚ್.ಬಿ.ರಶ್ಮಿ, ಕೆ.ರವಿಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರೂಪಾರಾಜ್ ಇದ್ದರು.